ಸೋಮವಾರ, ಜುಲೈ 4, 2022
22 °C

ರಾಜನಾಥ್ ಸಿಂಗ್ ಪುತ್ರ ಪಂಕಜ್‌ಗೆ 1.81 ಲಕ್ಷ ಮತಗಳ ಅಂತರದ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಯ್ಡ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ, ಬಿಜೆಪಿಯ ಪಂಕಜ್ ಸಿಂಗ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೋಯ್ಡ ಕ್ಷೇತ್ರದಲ್ಲಿ 1,81,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಂಕಜ್ ಸಿಂಗ್ 2,44,319 ಮತಗಳನ್ನು ಪಡೆದರೆ, ಎಸ್‌ಪಿಯ ಸುನೀಲ್ ಚೌಧರಿ 62,806 ಮತಗಳನ್ನು ಪಡೆದರು. ಬಿಎಸ್‌ಪಿಯ ಕೃಪಾ ರಾಮ್ ಶರ್ಮಾ 16,292 ಮತಗಳನ್ನು ಪಡೆದಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ, ಪಂಕಜ್ ಅವರು ಇದೇ ನೋಯ್ಡ ಕ್ಷೇತ್ರದಿಂದ 1,04,016 ಅಂತರದಲ್ಲಿ ಗೆದ್ದಿದ್ದರು.

ರಾಜನಾಥ್‌ ಸಿಂಗ್‌ ಅವರು 2000–02ರ ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು