ಚೆನ್ನೈ: ದಕ್ಷಿಣ ಭಾರತದ ಹಾಲು ಮಾರಾಟ ಮಂಡಳಿಗಳಿಗೆ ತಮ್ಮ ಮೊಸರಿನ ಉತ್ಪನ್ನದ ಮೇಲೆ ‘ದಹಿ’ ಎಂಬ ಹಿಂದಿ ಪದವನ್ನು ಮುದ್ರಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೀಡಿದ್ದ ಆದೇಶ ವಿವಾದವಾಗಿ ಕಡೆಗೆ ಎಫ್‌ಎಸ್‌ಎಸ್ಎಐ ಅದನ್ನು ಹಿಂಪಡೆದಿತ್ತು.
ಇದೀಗ ಚೆನ್ನೈನ ಪೋರ್ಟ್ ರೈಲ್ವೆ ನಿಲ್ದಾಣದ ಹಿಂದಿ ಫಲಕಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಮಸಿ ಬಳಿದಿರುವ ಘಟನೆ ನಡೆದಿದೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಹಿಂದಿ ಫಲಕಕ್ಕೆ ಮಸಿ ಬಳಿದಿರುವ ಕುರಿತು ಅನಾಮಧೇಯ ವ್ಯಕ್ತಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚೆನ್ನೈ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮಸಿ ಬಳಿದಿರುವ ಫಲಕವನ್ನು ರೈಲ್ವೆ ಪೊಲೀಸರು ಮೊದಲಿನಂತೆ ತಮಿಳು, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸ್ಷಷ್ಟವಾಗಿ ಕಾಣುವಂತೆ ಪುನರ್‌ಸ್ಥಾಪಿಸಿದ್ದಾರೆ.
ಮೊಸರಿನ ಪೊಟ್ಟಣಗಳ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಹಿಂದಿ ಪದ ಉಲ್ಲೇಖಿಸಲೇಬೇಕೆಂಬ ತನ್ನ ಆದೇಶವನ್ನು ಎಫ್‌ಎಸ್‌ಎಸ್‌ಎಐ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪರಿಷ್ಕರಿಸಿತ್ತು. ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಇಂಗ್ಲಿಷ್ ಜತೆಗೆ, ಪ್ರಾದೇಶಿಕ ಭಾಷೆಯ ಹೆಸರು ಉಲ್ಲೇಖಿಸಬಹುದು ಎಂದು ಹೇಳಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.