ಶನಿವಾರ, ಡಿಸೆಂಬರ್ 4, 2021
20 °C

ಮುಂಬೈನಲ್ಲಿ ಪರಿಸರ ಸ್ನೇಹಿ ಚಿತಾಗಾರಗಳು

ಪಿಟಿಐ Updated:

ಅಕ್ಷರ ಗಾತ್ರ : | |

ಚಿತಾಗಾರ– ಸಾಂದರ್ಭಿಕ ಚಿತ್ರ

ಮುಂಬೈ: ಕಡಿಮೆ ಸಮಯ‌, ಕಡಿಮೆ ಇಂಧನದಲ್ಲಿ, ಕಡಿಮೆ ಹೊಗೆ ಹೊರಹೊಮ್ಮಿಸುವ ಎರಡು ಪರಿಸರ ಸ್ನೇಹಿ ಚಿತಾಗಾರ ಘಟಕಗಳನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಸಿಯಾನ್‌ ಸ್ಮಶಾನದಲ್ಲಿ ನಿರ್ಮಾಣ ಮಾಡಿದೆ. 

‘ಸಾಂಪ್ರದಾಯಿಕ ಶವ ಸಂಸ್ಕಾರಕ್ಕೆ ಹೋಲಿಸಿದರೆ, ಈ ಪರಿಸರ ಸ್ನೇಹಿ ಚಿತಾಗಾರದಲ್ಲಿ ಹೊರಹೊಮ್ಮುವ ಹೊಗೆ ಪ್ರಮಾಣ ಕಡಿಮೆ. ಪ್ರಸ್ತುತ ಶವ ದಹನಕ್ಕಾಗಿ 350 ಕೆಜಿಯಿಂದ 400 ಕೆ.ಜಿ ಸೌದೆ ಬೇಕಿದೆ. ಇಷ್ಟು ಸೌದೆ ಉರಿಯಲು ನಾಲ್ಕು ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಆದರೆ ಪರಿಸರ ಸ್ನೇಹಿ ವಿಧಾನದಲ್ಲಿ ಶವ ದಹನ ಮಾಡಲು ಸುಮಾರು 125 ಕೆ.ಜಿ ಸೌದೆ ಸಾಕು. ಅದೂ ಎರಡು ಗಂಟೆಯೊಳಗೆ ಸಂಸ್ಕಾರ ಕಾರ್ಯ ಪೂರ್ಣಗೊಳ್ಳುತ್ತದೆ’ ಎಂದು ಬಿಎಂಸಿ ತಿಳಿಸಿದೆ.

‘ಈ ಚಿತಾಗಾರದಲ್ಲಿ ಶವ ಸಂಸ್ಕಾರದ ವೇಳೆ ಹೊರ ಹೊಮ್ಮುವ ಹೊಗೆ 100 ಅಡಿ ಎತ್ತರದ ಚಿಮಿಣಿ ಮೂಲಕ ಹೊರಗೆ ಬಿಡಲಾಗುತ್ತದೆ. ಹೊಗೆ ನೀರಿನ ಮೂಲಕ ಹಾದು ಹೋಗುವುದರಿಂದ ಹೊಗೆಯ ಕಣಗಳು ಗಾಳಿಯಲ್ಲಿ ಸೇರುವುದನ್ನು ನಿಯಂತ್ರಿಸುತ್ತದೆ’ ಎನ್ನುತ್ತಾರೆ ಬಿಎಂಸಿ ಅಧಿಕಾರಿಗಳು. ಇತ್ತೀಚೆಗೆ ಆ ಎರಡೂ ಘಟಕಗಳನ್ನು ಬಿಎಂಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.

ಈ ಪರಿಸರ ಸ್ನೇಹಿ ವ್ಯವಸ್ಥೆಯಲ್ಲಿ, ದೇಹವನ್ನು ವಿಶೇಷ ಟ್ರಾಲಿ ಮೇಲಿಟ್ಟು, ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಮರದ ಪದರವನ್ನು ಇರಿಸಲಾಗುತ್ತದೆ. ನಂತರ ಟ್ರಾಲಿಯನ್ನು ಚಿತಾಗಾರಕ್ಕೆ ತಳ್ಳಿ, ಬಾಗಿಲು ಮುಚ್ಚಲಾಗುತ್ತದೆ. ‘ಇದರಿಂದ ಚಿತಾಗಾರದೊಳಗೆ ತಾಪಮಾನ ಹೆಚ್ಚಾಗುತ್ತದೆ. 850 ರಿಂದ 950 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಪರಿಣಾಮವಾಗಿ, ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಮರದೊಂದಿಗೆ ಶವಸಂಸ್ಕಾರ ನಡೆಸಲಾಗುತ್ತದೆ’ ಎಂದು ಬಿಎಂಸಿ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು