ಶುಕ್ರವಾರ, ಮೇ 20, 2022
19 °C

11 ಗಂಟೆಯಲ್ಲಿ 180 ಕಿ.ಮೀ ಓಟ:1971ರ ವೀರ ಯೋಧರಿಗೆ ಬಿಎಸ್ಎಫ್ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: 11 ಗಂಟೆಯಲ್ಲಿ 180 ಕಿ.ಮೀ ಓಡುವ ಮೂಲಕ ಬಿಎಸ್ಎಫ್ ಯೋಧರು 1971ರ ಯುದ್ಧದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಓಟದಲ್ಲಿ ಬಿಎಸ್‌ಎಫ್‌ನ ಪುರುಷ ಮತ್ತು ಮಹಿಳಾ ಯೋಧರು ಸೇರಿ 930 ಮಂದಿ ಭಾಗವಹಿಸಿದ್ದರು. ಡಿಸೆಂಬರ್ 13ರ ಮಧ್ಯರಾತ್ರಿ ಈ ಓಟ ನಡೆದಿದೆ.

ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸಿದ 1971ರ ಯುದ್ಧದ ಗೆಲುವಿನ ನೆನಪಿಗಾಗಿ ಪ್ರತಿ ವರ್ಷ ಡಿ.16ರಂದು ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ.  ಅಂದು ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯು ಅತ್ಯಂತ ವೇಗದ ಮತ್ತು ಚಿಕ್ಕ ಸಮಯದಾಗಿದ್ದು,  ಡಿಸೆಂಬರ್ 3ರಂದು ಆರಂಭವಾಗಿದ್ದ ಯುದ್ಧ ಡಿಸೆಂಬರ್ 16ಕ್ಕೆ ಕೊನೆಗೊಂಡಿತ್ತು. ಯುದ್ಧದಲ್ಲಿ ಸೋತ  ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ 93,000 ಸೇನೆಯ ಜೊತೆ ಭಾರತಕ್ಕೆ ಶರಣಾಗಿದ್ದರು.  2ನೇ ಮಹಾಯುದ್ಧದ ನಂತರದ ಅತಿ ದೊಡ್ಡ ಸೇನಾ ಶರಣಾಗತಿಯಾಗಿದೆ. 

ಈ ವಿಜಯದ ನೆನಪಿಗಾಗಿ ನಡೆದ ಓಟದ ವಿಡಿಯೋವನ್ನು ಹಂಚಿಕೊಂಡಿರುವ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು. ಭಾರತದ ವಿಜಯವನ್ನು ಮೆಲುಕು ಹಾಕಿದ್ದಾರೆ.
  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು