ಸೋಮವಾರ, ಮಾರ್ಚ್ 20, 2023
24 °C

ರಾಮಚರಿತಮಾನಸ ಪ್ರಕರಣ: ಎಸ್‌ಪಿ ನಾಯಕ ಮೌರ್ಯ ವಿರುದ್ಧ ಎಫ್‌ಐಆರ್ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ರಾಮಚರಿತಮಾನಸದ ಕೆಲವು ಪುಟಗಳನ್ನು ಗುಂಪೊಂದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್‌ ಮೌರ್ಯ ಸೇರಿ ಇತರ 10 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವೃಂದಾವನ ಯೋಜನಾ ಸೆಕ್ಟರ್‌ನಲ್ಲಿ ಅಖಿಲ ಭಾರತೀಯ ಒಬಿಸಿ ಮಹಾಸಭಾ ಭಾನುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಮಹಿಳೆ ಮತ್ತು ದಲಿತ ಸಮುದಾಯದ ವಿರುದ್ಧ ಹೇಳಿಕೆ ಇರುವ ರಾಮಚರಿತಮಾನಸದ ಕೆಲ ಪುಟಗಳ ಜೆರಾಕ್ಸ್‌ ಪ್ರತಿಗಳನ್ನು ಮಾತ್ರ ಸುಡಲಾಗಿದೆ ಎಂದು ಸಮುದಾಯ ತಿಳಿಸಿದೆ. 

ಸತ್ನಮ್‌ ಸಿಂಗ್ ಲವಿ ಎಂಬುವವರು ಪಿಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು