ಮಂಗಳವಾರ, ಏಪ್ರಿಲ್ 20, 2021
31 °C

ಸಲಿಂಗ ಮದುವೆಗೆ ಕೇಂದ್ರ ಸರ್ಕಾರದ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಲಿಂಗ ವಿವಾಹದ ನೋಂದಣಿಗೆ ಅವಕಾಶ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ. ಸಲಿಂಗ ವಿವಾಹವನ್ನು ನಿಷೇಧಿಸುವುದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ. ‘ಮದುವೆ’ ಎಂಬುದು ಎರಡು ವ್ಯಕ್ತಿಗಳ ನಡುವೆ ನಡೆಯುವ ಸಾಮಾಜಿಕವಾಗಿ ಮಾನ್ಯತೆ ಪಡೆದ ಸಮ್ಮಿಲನ. ಇದಕ್ಕೆ ವೈಯಕ್ತಿಕ ಕಾನೂನು ಅಥವಾ ಇತರೆ ಕಾನೂನಿನ ಬೆಂಬಲ ಇದೆ ಎಂದು ಕೇಂದ್ರವು ವಾದಿಸಿದೆ. ಭಿನ್ನ ಲಿಂಗದ ವ್ಯಕ್ತಿಗಳ ನಡುವಣ ಮದುವೆಗೆ ಮಾತ್ರ ಕಾನೂನುಬದ್ಧ ಮಾನ್ಯತೆ ನೀಡಿಕೆಯಲ್ಲಿ ಸರ್ಕಾರದ ನ್ಯಾಯಬದ್ಧ ಹಿತಾಸಕ್ತಿ ಅಡಗಿದೆ  ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. 

‘ಮದುವೆ ಎಂಬ ಸಂಸ್ಥೆಗೆ ದೇಶದ ಎಲ್ಲ ಭಾಗಗಳಲ್ಲಿ ಪಾವಿತ್ರ್ಯ ಇದೆ. ನಮ್ಮ ದೇಶದಲ್ಲಿ, ಹೆಣ್ಣು ಮತ್ತು ಗಂಡಿನ ನಡುವಣ ಮದುವೆಯ ಬಂಧಕ್ಕೆ ಸಾಂವಿಧಾನಿಕ ಮಾನ್ಯತೆ ಇರುವುದರ ಜತೆಗೆ, ಪದ್ಧತಿಗಳು, ವಿಧಿ ವಿದಾನಗಳು, ಸಾಂಸ್ಕೃತಿಕ ನಿಯಮಗಳು ಮತ್ತು ಸಾಮಾಜಿಕ ಮೌಲ್ಯದ ಬಲ ಇದೆ’ ಎಂದು ಕೇಂದ್ರವು ಹೇಳಿದೆ. ಭಾರತದ ಕುಟುಂಬದ ಪರಿಕಲ್ಪ ನೆಯು ಸಲಿಂಗ ವ್ಯಕ್ತಿಗಳು ಒಟ್ಟಾಗಿ ಬದುಕುವುದು ಮತ್ತು ಲೈಂಗಿಕ ಸಂಬಂಧವನ್ನು ಹೊಂದು ವುದಕ್ಕಿಂತ ಭಿನ್ನವಾದುದು. ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಎಂಬುದು ಭಿನ್ನ ಪರಿಕಲ್ಪನೆ ಎಂದು ಸರ್ಕಾರ ವಾದಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು