ನವದೆಹಲಿ: ಕೇಂದ್ರ ಸರ್ಕಾರದ ಆನ್‌ಲೈನ್ ವೇದಿಕೆಯಲ್ಲಿ ಈ ಬಾರಿ 22 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆಗಳ ಅರ್ಜಿ ಬಂದಿವೆ. ಇದು ಮೂರು ವರ್ಷಗಳಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಸರ್ಕಾರ, ರಾಜ್ಯಸಭೆಗೆ ಗುರುವಾರ ತಿಳಿಸಿದೆ.

ಈ ಬಗ್ಗೆ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು,‘ 2020ರಲ್ಲಿ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ನಿರ್ವಹಣೆ ವ್ಯವಸ್ಥೆಗೆ (ಸಿಪಿಜಿಆರ್‌ಎಎಂಎಸ್) ಒಟ್ಟು 22,71,270 ಕುಂದುಕೊರತೆಗಳು ವರದಿಯಾಗಿವೆ. 2019 ರಲ್ಲಿ 18,67,758 ಮತ್ತು 2018ರಲ್ಲಿ 15,86,415 ಕುಂದುಕೊರತೆಗಳು ವರದಿಯಾಗಿದ್ದವು ಎಂದರು.

ಇದನ್ನೂ ಓದಿ... ಪ್ರಲಾಪ ಸಾಕು ಮಾಡಿ: ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ಇದರಲ್ಲಿ ಕಳೆದ ವರ್ಷ 23,19,569 ಅರ್ಜಿಗಳ ವಿಲೇವಾರಿ ಮಾಡಲಾಗಿತ್ತು. 2019 ರಲ್ಲಿ 16,39,856 ಮತ್ತು 2018ರಲ್ಲಿ 15,05,950 ಕುಂದುಕೊರತೆಗಳನ್ನು ಬಗೆಹರಿಸಲಾಗಿದೆ. 2020ರಲ್ಲಿ ವರದಿಯಾದ ಕೊಂದುಕೊರತೆಗಳಲ್ಲಿ 10,23,300 ಬಾಕಿ ಉಳಿದಿವೆ’ ಎಂದು ಹೇಳಿದರು.

‘ಸಿಪಿಜಿಆರ್‌ಎಎಂಎಸ್ ವರದಿಯಾಗುವ ಕುಂದುಕೊರತೆಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಸಚಿವಾಲಯದ ಅಧಿಕಾರಿಗಳು ಪರಿಶೀಲಿಸಿ, ಅವುಗಳನ್ನು ಬಗೆಹರಿಸುತ್ತಾರೆ’ ಎಂದು ಅವರು ತಿಳಿಸಿದರು.

ಇದನ್ನೂ ಓದಿ... ಗಣರಾಜ್ಯೋತ್ಸವದ ದಿನ ನಡೆದ ಗಲಭೆಗೆ ರೈತರು ಜವಾಬ್ದಾರರಲ್ಲ: ಎಚ್.ಡಿ. ದೇವೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.