ನವದೆಹಲಿ: ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಶುಕ್ರವಾರ ಬೆಂಗಳೂರು ರೋಸ್ ಮತ್ತು ಕೃಷ್ಣಪುರಂ ತಳಿಗಳ ಈರುಳ್ಳಿಯನ್ನು ತಲಾ 10 ಸಾವಿರ ಮೆಟ್ರಿಕ್ ಟನ್ನಿನಂತೆ ರಫ್ತು ಮಾಡಲು ಅನುಮತಿ ನೀಡಿತು.

ದೇಸೀಯ ಮಾರುಕಟ್ಟೆಯಲ್ಲಿ ಈರುಳ್ಳೀ ಬೆಲೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಬೆಲೆ ನಿಯಂತ್ರಿಸುವುದಕ್ಕಾಗಿ ಬೆಂಗಳೂರು ರೋಸ್ ಮತ್ತು ಕೃಷ್ಣಪುರಂ ವೆರೈಟಿ ತಳಿಗಳು ಸೇರಿದಂತೆ, ರಫ್ತು ಗುಣಮಟ್ಟವಿರುವ ಈರುಳ್ಳಿ ತಳಿಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿತ್ತು. ಈ ಎರಡು ತಳಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ, ಪೂರ್ವ ದೇಶಗಳಲ್ಲಿ ಈ ತಳಿಯ ಈರುಳ್ಳಿಗೆ ಬಲು ಬೇಡಿಕೆ ಇದೆ.

‘ಬೆಂಗಳೂರು ರೋಸ್ ಈರುಳ್ಳಿ ಮತ್ತು ಕೃಷ್ಣಪುರಂ ಈರುಳ್ಳಿ ತಳಿಗಳನ್ನು ತಲಾ 10ಸಾವಿರ ಮೆಟ್ರಿಕ್ ಟನ್ನಿನಂತೆ ರಫ್ತು ಮಾಡಲು ತಕ್ಷಣದಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗಿದೆ. ಈ ಆದೇಶ ಮುಂದಿನ ವರ್ಷದ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರುತ್ತದೆ‘ ಎಂದು ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.

ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರುತ್ತಿದ್ದಂತೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕದ ಬಿಜೆಪಿ ನಾಯಕರು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ರಫ್ತು ತೆರವುಗೊಳಿಸುವಂತೆ ಒತ್ತಾಯಿಸಿದ್ದರು.

ಎರಡು ತಳಿಗಳ ಈರುಳ್ಳಿ ಚೆನ್ನೈ ಬಂದರು ಮೂಲಕ ರಫ್ತಾಗುತ್ತದೆ. ಅದಕ್ಕೂ ಮುನ್ನ ಕರ್ನಾಟಕದ ತೋಟಗಾರಿಕಾ ಆಯುಕ್ತರಿಂದ ಬೆಂಗಳೂರು ರೋಸ್ ತಳಿಗೆ ಹಾಗೂ ಆಂಧ್ರಪ್ರದೇಶದ ಕಡಪದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಂದ ರಫ್ತು ಮಾಡುವುದಕ್ಕೆ ಅನುಮತಿ ಪತ್ರ ಪಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.