ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ 3ನೇ ಎಲೆಕ್ಟ್ರಾನಿಕ್ಸ್‌ ಕ್ಲಸ್ಟರ್‌: ₹1500 ಕೋಟಿ ಹೂಡಿಕೆ ನಿರೀಕ್ಷೆ

ಧಾರವಾಡದ ಕೋಟೂರ ಹಾಗೂ ಬೇಲೂರ ಗ್ರಾಮಗಳಲ್ಲಿ ಮೂರನೇ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌
Last Updated 24 ಮಾರ್ಚ್ 2023, 15:34 IST
ಅಕ್ಷರ ಗಾತ್ರ

ನವದೆಹಲಿ: ಧಾರವಾಡದಲ್ಲಿ ದೇಶದ ಮೂರನೇ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ (EMC) ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ಚಂದ್ರಶೇಖರ್‌ ಹೇಳಿದ್ದಾರೆ.

ಧಾರವಾಡದ ಕೋಟೂರ ಹಾಗೂ ಬೇಲೂರ ಗ್ರಾಮಗಳಲ್ಲಿ, ಕ್ರಮವಾಗಿ 88.48 ಹಾಗೂ 136.02 ಎಕರೆ ವಿಸ್ತೀರ್ಣದಲ್ಲಿ ಈ EMC ತಲೆ ಎತ್ತಲಿದೆ. ಒಟ್ಟು ವಿಸ್ತೀರ್ಣ 224.5 ಎಕರೆಯಾಗಿದೆ.

ಈ ಯೋಜನೆಗೆ ₹ 179 ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹ 89 ಕೋಟಿ.

ಈ ಹೊಸ ಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ನಿಂದ ₹ 1500 ಕೋಟಿ ಹೂಡಿಕೆ ಹರಿದು ಬರುವ ನಿರೀಕ್ಷೆ ಇದ್ದು, 18,000 ಮಂದಿಗೆ ಉದ್ಯೋಗ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಮೂರು ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ನ ಒಟ್ಟು ವಿಸ್ತೀರ್ಣ 1,337 ಎಕರೆಯಷ್ಟಾಗಲಿದೆ. ಒಟ್ಟು ₹ 1,903 ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರದ ಪಾಲು ₹ 889 ಕೋಟಿ.

ಮೂರು ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ನಿಂದ ಕರ್ನಾಟಕಕ್ಕೆ ₹ 20,910 ಕೋಟಿ ಬಂಡವಾಳ ಬರುವ ಸಾಧ್ಯತೆ ಇದೆ. ಈ ಕ್ಲಸ್ಟರ್‌ನಲ್ಲಿ ಆ್ಯಪಲ್‌ ಫೋನ್‌ ಉತ್ಪಾದನಾ ಘಟಕಗಳೂ ಇರಲಿವೆ.

ಮೈಸೂರು ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಇನ್ನೆರಡು ಕ್ಲಸ್ಟರ್‌ಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT