ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ದೇಣಿಗೆ ಪಡೆಯುವ ನಿಯಮಗಳು ಮತ್ತಷ್ಟು ಬಿಗಿ: ಕೇಂದ್ರ

Last Updated 12 ನವೆಂಬರ್ 2020, 2:06 IST
ಅಕ್ಷರ ಗಾತ್ರ

ನವದೆಹಲಿ: ಇನ್ನು ಮುಂದೆ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ವಿದೇಶಿ ದೇಣಿಗೆ ಪಡೆಯುವುದು ಸುಲಭವಾಗಲಾರದು. ಇದಕ್ಕಾಗಿ ಕೇಂದ್ರ ಸರ್ಕಾರ ಬಿಗಿ ಕಾನೂನುಗಳನ್ನು ರೂಪಿಸಿ ಹೊಸ ಅಧಿಸೂಚನೆ ಹೊರಡಿಸಿದೆ.

ವಿದೇಶಿ ದೇಣಿಗೆ ಸ್ವೀಕರಿಸುವ ಸಂಬಂಧ ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳ ಹಿಂದೆ ಎಫ್‌ಸಿಆರ್‌ಎ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದೀಗ ದೇಣಿಗೆ ಪಡೆಯುವ ಸಂಬಂಧ ಎನ್‌ಜಿಒಗಳು ಅನುಸರಿಸಬೇಕಾದ ನಿಯಮಗಳ ಕರಿತು ಅಧಿಸೂಚನೆ ಹೊರಡಿಸಿದೆ.

ವಿದೇಶಿ ದೇಣಿಗೆ ಪಡೆಯುವ ಯಾವುದೇ ಸಂಸ್ಥೆಯು ಕನಿಷ್ಠ 3 ವರ್ಷಗಳಿಂದ ತನ್ನ ಸೇವೆಯಲ್ಲಿ ಸಕ್ರಿಯವಾಗಿರಬೇಕು. ಇದಕ್ಕಾಗಿ ಸಂಸ್ಥೆಯು ಚಟುವಟಿಕೆಗಳಿಗಾಗಿ ಸುಮಾರು ₹ 15 ಲಕ್ಷ ಖರ್ಚು ಮಾಡಿರಬೇಕು. ಹಾಗೇ ದೇಣಿಗೆ ಪಡೆಯುವ ಉದ್ದೇಶ, ಅದನ್ನು ಯಾವುದಕ್ಕೆ ಬಳಕೆ ಮಾಡಲಾಗಿದೆ ಎಂಬುದನ್ನು ನಮೂದಿಸಬೇಕು.

ಇನ್ನು ಮುಂದೆ ದೇಣಿಗೆ ಪಡೆಯುವ ಸಂಸ್ಥೆಗಳು ಕಡ್ಡಾಯವಾಗಿ ಎಪ್‌ಸಿಆರ್‌ಎ ಅಕೌಂಟ್‌ ಹೊಂದಿರುವುದು ಕಡ್ಡಾಯವಾಗಿದೆ.

ದೇಶದಲ್ಲಿ 22,400 ನೋಂದಾಯಿತ ಎನ್‌ಜಿಒಗಳು ಕೆಲಸ ಮಾಡುತ್ತಿವೆ. 2016 ರಿಂದ 2019ರ ವರೆಗೂ ಹಲವು ಎನ್‌ಜಿಒಗಳು ₹ 58 ಸಾವಿರ ಕೋಟಿಗೂ ಹೆಚ್ಚು ಮೊತ್ತದ ವಿದೇಶಿ ದೇಣಿಗೆಯನ್ನು ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT