ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ದುರ್ಬಳಕೆ: ಐಎಎಸ್‌ ದಂಪತಿ ವರ್ಗಾವಣೆ

Last Updated 26 ಮೇ 2022, 20:19 IST
ಅಕ್ಷರ ಗಾತ್ರ

ನವದೆಹಲಿ: ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಹಿಂದೆಯೇ ಐಎಎಸ್‌ ಅಧಿಕಾರಿ ದಂಪತಿಯನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ.

1994ನೇ ತಂಡದ ಅಧಿಕಾರಿಗಳಾದ ಖಿರ್ವಾರ್ಅವರನ್ನು ಲಡಾಖ್‌ಗೆ ಹಾಗೂ ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆವರ್ಗಾಯಿಸಲಾಗಿದೆ. ಅಧಿಕಾರಿ‌ ತಮ್ಮ ಸಾಕು ನಾಯಿಯು ವಿಹಾರ ಮಾಡಲುಅನುವಾಗುವಂತೆ ಇಲ್ಲಿನ ತ್ಯಾಗರಾಜ್‌ಕ್ರೀಡಾಂಗಣದಲ್ಲಿ ಅವಧಿಗೆ ಮೊದಲೇ ಕ್ರೀಡಾ ಚಟುವಟಿಕೆಯನ್ನು ಬಂದ್ ಮಾಡಿಸುತ್ತಿದ್ದರು ಎಂಬ ಆರೋಪವಿತ್ತು.

ಅಧಿಕಾರಿ ದಂಪತಿ ಈ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಪ್ರಕಟವಾಗಿತ್ತು. ಈ ಸಂಬಂಧ ವರದಿ ನೀಡುವಂತೆ ದೆಹಲಿಯ ಮುಖ್ಯ ಕಾರ್ಯದರ್ಶಿಯಿಂದ ಕೇಂದ್ರ ವರದಿ ಕೇಳಿತ್ತು.

ವರದಿಯ ಹಿಂದೆಯೇ ಕೇಂದ್ರ ಸರ್ಕಾರವು ವರ್ಗಾವಣೆಯನ್ನು ಮಾಡಿ ಆದೇಶ ಹೊರಡಿಸಿದೆ.

‘ರಾತ್ರಿ 10ರವರೆಗೆ ತೆರೆದಿರಬೇಕು’: ದೆಹಲಿಯಲ್ಲಿರುವ ಎಲ್ಲ ಕ್ರೀಡಾ ಸೌಲಭ್ಯ ಕೇಂದ್ರಗಳು ರಾತ್ರಿ 10 ಗಂಟೆವರೆಗೆ ಕ್ರೀಡಾಪಟುಗಳಿಗೆ ಮುಕ್ತವಾಗಿರಬೇಕು ಎಂದು ಮುಖ್ಯಮಂತ್ರಿ ಅರವಿಂದ್ಕೇಜ್ರಿವಾಲ್ ಸೂಚನೆ ನೀಡಿದ್ದಾರೆ.

‘ಕ್ರೀಡಾಂಗಣಗಳು ಸಂಜೆ 6 ಅಥವಾ 7 ಗಂಟೆಗೆ ಮುಚ್ಚುತ್ತಿದ್ದು, ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಕ್ರೀಡಾಪಟುಗಳಿಗೆ ಸೌಲಭ್ಯಗಳು ಲಭ್ಯವಿರಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT