ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೌಗೋಳಿಕ ಸಮಗ್ರತೆ ರಕ್ಷಣೆ: ಪಾಕ್‌ಗೆ ಬೆಂಬಲ ಘೋಷಿಸಿದ ಚೀನಾ

Published : 2 ನವೆಂಬರ್ 2022, 19:46 IST
ಫಾಲೋ ಮಾಡಿ
Comments

ನವದೆಹಲಿ: ತನ್ನ ಸಾರ್ವಭೌಮತೆ ಹಾಗೂ ಭೌಗೋಳಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಚೀನಾ ಬುಧವಾರ ಘೋಷಿಸಿದೆ.

ಪಾಕಿಸ್ತಾನ ಆಕ್ರಮಿಸಿಕೊಂಡಿರುವ ತನ್ನ ಪ್ರದೇಶವನ್ನು ಮರುವಶ ಮಾಡಿಕೊಳ್ಳುವುದಾಗಿ ಇತ್ತೀಚೆಗೆ ಭಾರತ ಹೇಳಿತ್ತು. ಇದರ ಬೆನ್ನಲ್ಲೇ ಈಗ ಪಾಕಿಸ್ತಾನಕ್ಕೆ ಚೀನಾ ಈ ಅಭಯ ನೀಡಿರುವುದು ಗಮನಾರ್ಹ.

ಚೀನಾಕ್ಕೆ ಭೇಟಿ ನೀಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರು, ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ, ಜಿನ್‌ಪಿಂಗ್‌ ಅವರಿಂದ ಈ ಭರವಸೆ ಹೊರಬಿದ್ದಿದೆ.

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಷಿ ಹಾಗೂ ಶರೀಫ್‌ ಚರ್ಚಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಭಾರತ ಕಳವಳ ಹಾಗೂ ಆಕ್ಷೇಪ ವ್ಯಕ್ತಪಡಿಸಿದೆ. ಉಭಯ ದೇಶಗಳ ಈ ನಡೆ ದೇಶದ ಸಾರ್ವಭೌಮತೆಯನ್ನು ಕುಗ್ಗಿಸುವ ಹುನ್ನಾರವಾಗಿದೆ ಎಂದೂ ಭಾರತ ಹೇಳಿದೆ.

ಗಿಲ್ಗಿಟ್‌, ಬಾಲ್ಟಿಸ್ತಾನ ಸೇರಿದಂತೆ ಪಾಕಿಸ್ತಾನ ಆಕ್ರಮಿತ ಪ್ರದೇಶಗಳು ಮರುವಶವಾಗದ ಹೊರತು ಭಾರತದ ಅಭಿವೃದ್ಧಿಯ ಪಯಣ ಪೂರ್ಣಗೊಳ್ಳುವುದಿಲ್ಲ ಎಂದು ಅಕ್ಟೋಬರ್‌ 27ರಂದು ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT