ಭಾನುವಾರ, ಮಾರ್ಚ್ 7, 2021
32 °C

ದೇಶದ ನೆಲದಲ್ಲಿ ಚೀನಾ ಹಳ್ಳಿ ನಿರ್ಮಾಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಅರುಣಾಚಲ ಪ್ರದೇಶ ಮತ್ತು ಟಿಬೆಟ್‌ ಗಡಿಯ ವಿವಾದಿತ ಪ್ರದೇಶದಲ್ಲಿ ಚೀನಾ ಹಲವು ದಶಕಗಳಿಂದ ನಿರ್ಮಾಣ ಕಾರ್ಯಗಳನ್ನು ನಡೆಸುತ್ತಲೇ ಇದೆ. ಇದನ್ನು ಗಮನಿಸುತ್ತಲೇ ಇದ್ದೇವೆ’ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿದೆ.

ಅರುಣಾಚಲ ಪ್ರದೇಶದಲ್ಲಿ, ಭಾರತದ ವ್ಯಾಪ್ತಿಯಲ್ಲಿ ಚೀನಾ ಹೊಸದಾಗಿ ಹಳ್ಳಿಯೊಂದನ್ನು ನಿರ್ಮಿಸಿದೆ ಎಂದು ಹಲವು ಮಾಧ್ಯಗಳು ವರದಿ ಮಾಡಿವೆ. ಈ ವರದಿಗೆ ಪ್ರತಿಯಾಗಿ ಸಚಿವಾಲಯವು ಈ ಹೇಳಿಕೆ ನೀಡಿದೆ.

ಅರುಣಾಚಲ ಪ್ರದೇಶದ ಸುಬನ್‌ಸಿರಿ ಜಿಲ್ಲೆಯ ತ್ಸಾರಿ ಚು ನದಿಯ ದಂಡೆಯಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸಿದೆ. ಇದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. 2019ರ ಆಗಸ್ಟ್‌ನಲ್ಲಿ ತೆಗೆಯಲಾಗಿದ್ದ ಆ ಪ್ರದೇಶದ ಉಪಗ್ರಹ ಚಿತ್ರದಲ್ಲಿ, ಯಾವುದೇ ಹಳ್ಳಿ ಇರಲಿಲ್ಲ.
ಆದರೆ 2020ರ ನವೆಂಬರ್‌ನಲ್ಲಿ ತೆಗೆಯಲಾದ ಉಪಗ್ರಹ ಚಿತ್ರದಲ್ಲಿ, ಹೊಸ ಹಳ್ಳಿ ನಿರ್ಮಾಣವಾಗಿರುವುದು ದೃಢಪಟ್ಟಿದೆ ಎಂದು ಮಾಧ್ಯಮಗಳು ಹೇಳಿವೆ.

2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತದ ಸೈನಿಕರ ಜತೆ ಗಡಿ ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲೇ ಚೀನಾ, ಈ ಭಾಗದಲ್ಲಿ ನಿರ್ಮಾಣ ಚಟುವಟಿಕೆಯನ್ನು ನಡೆಸಿದೆ. ಈಗ ಈ ಹಳ್ಳಿಗೆ ಸಮೀಪದಲ್ಲಿ ಸುಸಜ್ಜಿತ ರಸ್ತೆಯನ್ನೂ ನಿರ್ಮಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅರುಣಾಚಲ ಪ್ರದೇಶದನಮ್ಮ ನೆಲದಲ್ಲಿ ಚೀನಾ ನಿರ್ಮಾಣ ಕಾರ್ಯ ನಡೆಸುತ್ತಿದೆ. ಗಡಿಯಿಂದ ಸುಮಾರು 60-70 ಕಿ.ಮೀ.ನಷ್ಟು ಒಳಗಿನ ಪ್ರದೇಶದವರೆಗೂ ಚೀನಾ ಬಂದಿದೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಾಪಿರ್ ಗಾವೊ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು