ಮಂಗಳವಾರ, ಆಗಸ್ಟ್ 3, 2021
23 °C

ಚೀನಾ ಕಂಪನಿಗಳು ಕಪ್ಪು ಪಟ್ಟಿಗೆ: ಅಮೆರಿಕ ವಿರುದ್ಧ ಕ್ರಮಕ್ಕೆ ಚೀನಾ ಎಚ್ಚರಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಉಯಿಘರ್‌ ನಾಗರಿಕರು ಮತ್ತು ಇತರೆ ಮುಸ್ಲಿಂ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ನಡೆಸುವಲ್ಲಿ ಚೀನಾದ ಕೆಲವು ಕಂಪನಿಗಳ ಪಾತ್ರವಿದೆ ಎಂದು ಆರೋಪಿಸಿ, ಅಂತಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿರುವ ಅಮೆರಿಕದ ನಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚೀನಾ ಎಚ್ಚರಿಸಿದೆ.

ಅಮೆರಿಕದ ಈ ಕ್ರಮ ‘ಕಾರಣವಿಲ್ಲದೇ ಚೀನಾದ ಉದ್ಯಮಗಳಿಗೆ ತಡೆಯೊಡ್ಡುವ ಮತ್ತು ಅಂತರರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ‘ ಎಂದು ಚೀನಾದ ವಾಣಿಜ್ಯ ಸಚಿವಾಲಯ ಪ್ರತಿಪಾದಿಸಿದೆ.

‘ಚೀನಾ ತನ್ನ ಕಂಪನಿಗಳ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ನಿಶ್ಚಿತವಾಗಿ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ‘ ಎಂದು ಅದು ತಿಳಿಸಿದೆ.

ಆದರೆ, ಈ ಕುರಿತು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ಚೀನಾ ವಿವರಗಳನ್ನು ನೀಡಲಿಲ್ಲ.

ಇದೇ ವೇಳೆ, ಕ್ಸಿನ್‌ಜಿಯಾಂಗ್‌ನಲ್ಲಿ ಬಲವಂತವಾಗಿ ಕಾರ್ಮಿಕರನ್ನು ಬಂಧಿಸಿರುವ ಆರೋಪವನ್ನು ಚೀನಾ ಅಲ್ಲಗಳೆದಿದೆ. ವೀಸಾ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲವು ಕಂಪನಿಗಳು ಮತ್ತು ಅಧಿಕಾರಿಗಳ ಮೇಲೆ ವಿಧಿಸಿರುವ ನಿರ್ಬಂಧಗಳ ಕುರಿತು ಹೆಚ್ಚು ಪ್ರತಿಕ್ರಿಯೆ ನೀಡಿದೆ.

ಕ್ಸಿಯಾಂಗ್‌ನಲ್ಲಿರುವ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ಸಾಮೂಹಿಕ ಬಂಧನ ಮತ್ತು ಉನ್ನತ-ತಂತ್ರಜ್ಞಾನದೊಂದಿಗೆ ಕಣ್ಗಾವಲನ್ನು ಸಕ್ರಿಯಗೊಳಿಸಲು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಂಸ್ಥೆಗಳು ಮತ್ತು ಇತರ ವ್ಯವಹಾರಗಳು ಚೀನಾಗೆ ನೆರವು ನೀಡುತ್ತಿವೆ ಎಂದು ಅಮೆರಿಕದ ವಾಣಿಜ್ಯ ಇಲಾಖೆ ಶುಕ್ರವಾರ ಹೇಳಿಕೆಯಲ್ಲಿ ಆರೋಪಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು