ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರ: 30 ವರ್ಷದಲ್ಲಿ ಮೊದಲ ಬಾರಿಗೆ ಸಿಆರ್‌ಪಿಎಫ್‌ನಿಂದ ಮಹಿಳೆಯರ ತಪಾಸಣೆ

Last Updated 19 ಅಕ್ಟೋಬರ್ 2021, 3:33 IST
ಅಕ್ಷರ ಗಾತ್ರ

ಶ್ರೀನಗರ:ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿ ಕೇಂದ್ರೀಯ ಮೀಸಲುಪೊಲೀಸ್‌ ಪಡೆಯ (ಸಿಆರ್‌ಪಿಎಫ್‌)ಮಹಿಳಾ ಸಿಬ್ಬಂದಿಯು ನಗರದ ಲಾಲ್‌ ಚೌಕ್‌ ಪ್ರದೇಶದಲ್ಲಿ ಮಹಿಳೆಯರ ತಪಾಸಣೆ ನಡೆಸಿದರು.

ಮಹಿಳಾ ಪಾದಚಾರಿಗಳಬ್ಯಾಗ್ ಮತ್ತು ಇತರವಸ್ತುಗಳನ್ನು ಪರಿಶೀಲಿಸಿದರು.

ಕಳೆದ30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಸಂಗ ನಡೆಯಿತು. ಇದಕ್ಕೆಪ್ರಬಲ ಪ್ರತಿರೋಧ ವ್ಯಕ್ತವಾಗಿಲ್ಲವಾದರೂ, ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʼಮಹಿಳೆಯರು ಖಾಸಗಿಯಾಗಿರಿಸಿಕೊಳ್ಳುವಹಲವು ವಸ್ತುಗಳನ್ನು ಕೊಂಡೊಯ್ಯುತ್ತಿರುತ್ತಾರೆ. ಸಿಆರ್‌ಪಿಎಫ್‌ ಮಹಿಳಾ ಸಿಬ್ಬಂದಿ ಖಾಸಗಿತನವನ್ನು ಕಾಪಾಡುವ ಸಲುವಾಗಿ ತಾತ್ಕಾಲಿಕ ಕೇಂದ್ರಗಳನ್ನು ಸ್ಥಾಪಿಸಿ ತಪಾಸಣೆ ನಡೆಸಬೇಕುʼ ಎಂದು ಸೌರಾ ನಿವಾಸಿ ಫರೀದಾ ಮನವಿ ಮಾಡಿದ್ದಾರೆ.

ತಮ್ಮನ್ನು ತಪಾಸಣೆ ನಡೆಸಿದ್ದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದನ್ನುನಡೆಸಿದ ರೀತಿಯ ಬಗ್ಗೆಅಸಮಾಧನವಿದೆ ಎಂದೂ ಹೇಳಿದ್ದಾರೆ.‌

ಕಾಶ್ಮೀರದಲ್ಲಿ ಈಹಿಂದೆ ಪಾದಚಾರಿ ಮಹಿಳೆಯರನ್ನುತಪಾಸಣೆ ನಡೆಸಿರಲಿಲ್ಲ. ಕಳೆದ ಕೆಲವು ದಿನಗಳಿಂದ ವಲಸಿಗರ ಮೇಲಿನ ದಾಳಿ ಪ್ರಕಣಗಳು ಹೆಚ್ಚಾಗಿದ್ದುಇದುವರೆಗೆ11 ಅಮಾಯಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT