ಮಂಗಳವಾರ, ಆಗಸ್ಟ್ 9, 2022
23 °C

ಉದಯಪುರ: ಮೃತ ಟೈಲರ್‌ ಮಗನಿಗೆ ಸರ್ಕಾರಿ ನೌಕರಿಯ ಭರವಸೆ ನೀಡಿದ ಗೆಹಲೋತ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಉದಯಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ನನಗೆ ಸರ್ಕಾರಿ ನೌಕರಿಯ ಭರವಸೆ ನೀಡಿದ್ದಾರೆ ಎಂದು ಮೃತ ಕನ್ಹಯ್ಯ ಲಾಲ್‌ ಅವರ ಮಗ ಯಶ್‌ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು.

‘ಮುಖ್ಯಮಂತ್ರಿಯವರೊಂದಿಗೆ ನಾನು ಮಾತನಾಡಿದೆ. ಅವರು ನಮಗೆ ಹಣಕಾಸಿನ ನೆರವು ನೀಡಿದ್ದಾರೆ. ನನಗೆ ಸರ್ಕಾರಿ ನೌಕರಿಯ ಆಶ್ವಾಸನೆ ಕೊಟ್ಟಿದ್ದಾರೆ. ಅವರು ನಮಗೆ ಸಹಕಾರ ನೀಡುತ್ತಿದ್ದಾರೆ. ನಾವೂ ಸಹಕರಿಸುತ್ತಿದ್ದೇವೆ’ ಎಂದು ಯಶ್‌ ಹೇಳಿದ್ದಾರೆ.

‘ನಾವು ಭದ್ರತೆ ಕೋರಿದ್ದೇವೆ. ನಮ್ಮ ತಂದೆಯೂ ಭದ್ರತೆ ಕೇಳಿದ್ದರು. ಆದರೆ ಕೊಟ್ಟಿರಲಿಲ್ಲ. ನಮಗೆ ಭದ್ರತೆಯ ಅಗತ್ಯವಿದೆ. ಆ ಬಗ್ಗೆ ಭರವಸೆಯೂ ಸಿಕ್ಕಿದೆ. ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯನ್ನೇ ನೀಡಬೇಕು’ ಎಂದು ಯಶ್‌ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು