ಬುಧವಾರ, ಮಾರ್ಚ್ 29, 2023
24 °C

ಉತ್ತರ, ವಾಯವ್ಯ ಭಾರತದಲ್ಲಿ ಮುಂದುವರಿದ ಶೀತಗಾಳಿ: ಜನರು ತತ್ತರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಭಾರತ ಹಾಗೂ ವಾಯವ್ಯ ಭಾರತದ ಪ್ರದೇಶಗಳಲ್ಲಿ ಬುಧವಾರ ಶೀತಗಾಳಿ ಹೆಚ್ಚಾಗಿದ್ದು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 11.7 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.

ರಾಜಸ್ಥಾನದ ಸಿಕರ್‌ನಲ್ಲಿ ಮೈನಸ್ 1.5 ಡಿಗ್ರಿ ಸೆಲ್ಸಿಯಸ್, ಚುರುವಿನಲ್ಲಿ ಮೈನಸ್ 1.2 ಮತ್ತು ಕರೌಲಿನಲ್ಲಿ ಮೈನಸ್ 0.8 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ರಾತ್ರಿ ವೇಳೆ ಕನಿಷ್ಠ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ. ಫತೇಪುರ್ ನಗರದಲ್ಲಿ ಮೈನಸ್ 2.2, ನರಿಯಾ 0.3 ಡಿಗ್ರಿ ಸೆಲ್ಸಿಯಸ್, ಚಿತ್ತೋರ್‌ಗಢ 0.1 , ಅಲ್ವಾರ್ 0.5 ಮತ್ತು ಬರನ್ 2 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿವೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ತೀವ್ರವಾದ ಶೀತ ಹವಾಮಾನ ಪರಿಸ್ಥಿತಿ ಮುಂದುವರೆದಿದೆ.

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 8ನೇ ದಿನವು ಶೀತ ಗಾಳಿ ಬೀಸುತ್ತಿದೆ. 12 ವರ್ಷಗಳ ಬಳಿಕ ಜನವರಿ ತಿಂಗಳಲ್ಲಿ ನಿರಂತರ ಕನಿಷ್ಠ ತಾಪಮಾನ ಮುಂದುವರೆದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದರ್‌ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 2.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಶ್ರೀನಗರದಲ್ಲಿ ಕನಿಷ್ಠ ಮೈನಸ್ 4.3 ಡಿಗ್ರಿ ಸೆಲ್ಸಿಯಸ್, ಖಾಜಿಗುಂಡ್ ಮತ್ತು ಕಣಿವೆಯ ಹೆಬ್ಬಾಗಿಲು ಮೈನಸ್ 7.4ರಷ್ಟು, ದಕ್ಷಿಣ ಕಾಶ್ಮೀರದ ಕೊಕರ್ನಾಗ್ ಮೈನಸ್ 6.2, ಕುಪ್ವಾರದಲ್ಲಿ ಮೈನಸ್ 6.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌ದ ಬಟಿಂಡಾದಲ್ಲಿ ಕನಿಷ್ಠ ತಾಪಮಾನ ಮೈನಸ್ 0.2 ಡಿಗ್ರಿ ಸೆಲ್ಸಿಯಸ್, ಫರಿದ್‌ಕೋಟ್ 0.5, ಅಮೃತಸರ 2.9, ಲುಧಿಯಾನ 2.8, ಪಟಿಯಾಲ 2.6, ಪಠಾಣ್‌ಕೋಟ್ 3.2, ಮೊಘಾ 0.5, ಮೊಹಾಲಿ 4.2 ಹಾಗೂ ಚಂಡೀಗಢದಲ್ಲಿ ಕನಿಷ್ಠ 3.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಹರಿಯಾಣದ ನರ್ನಾಲ್‌ನಲ್ಲಿ 0.5 ಡಿಗ್ರಿ ಸೆಲ್ಸಿಯಸ್, ಸಿರ್ಸಾ 1, ಹಿಸಾರ್ 2, ಕರ್ನಾಲ್ 2.4 , ರೋಹ್ಟಕ್ 2.8 ಡಿಗ್ರಿ ಸೆಲ್ಸಿಯಸ್ ಮತ್ತು ಅಂಬಾಲಾದಲ್ಲಿ 4.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜನವರಿ 18 ರವರೆಗೆ ಹವಾಮಾನವು ಶುಷ್ಕವಾಗಿ ಕಂಡುಬರುವುದು. ರಾತ್ರಿಯ ಸಮಯದಲ್ಲಿ ತಾಪಮಾನವು ಮತ್ತಷ್ಟು ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.                

 ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು