ಶನಿವಾರ, ಸೆಪ್ಟೆಂಬರ್ 18, 2021
26 °C

ಕಾಂಡೋಮ್ ಸಿಕ್ಕಿತೆಂದ ತಕ್ಷಣ ಅದು ಒಮ್ಮತದ ಸೆಕ್ಸ್ ಎನ್ನಲಾಗದು; ಕೋರ್ಟ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ‘ಅತ್ಯಾಚಾರ ನಡೆದ ಸ್ಥಳದಲ್ಲಿ ಕಾಂಡೋಮ್ ಸಿಕ್ಕಿದೆ ಎಂದು ಅದನ್ನು ಒಮ್ಮತದ ಸೆಕ್ಸ್ ಎನ್ನಲಾಗದು‘ ಎಂದು ಮುಂಬೈ ಸೆಷನ್ಸ್ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ ನೌಕಾದಳದ ನೌಕರರೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರಾದ ಸಂಜಶ್ರೀ ಘರತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ತನಿಖೆಯ ವೇಳೆ ತನಗೆ ಎದುರಾಗಬಹುದಾದ ತೊಡರುಗಳನ್ನು ತಪ್ಪಿಸಲು ಆರೋಪಿ ಕಾಂಡೋಮ್ ಬಳಸಿರಬಹುದಾದ ಸಾಧ್ಯತೆ ಇರುತ್ತದೆ. ಅದಾಗ್ಯೂ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ವಿಚಾರಣೆ ಮುಗಿದಿರುವುದರಿಂದ ಆರೋಪಿಗೆ ಜಾಮಿನು ನೀಡಲಾಗಿದೆ‘ ಎಂದು ಕೋರ್ಟ್ ಹೇಳಿದೆ.

ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಪತ್ನಿ ನೌಕಾದಳದ ಕ್ವಾಟರ್ಸ್‌ನಲ್ಲಿ ವಾಸವಾಗಿದ್ದರು. ಈ ವೇಳೆ ದಂಪತಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಕಳೆದ ಏಪ್ರಿಲ್ 29 ರಂದು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳ ಮಹಜರು ವೇಳೆ ಕಾಂಡೋಮ್ ಸಿಕ್ಕಿದ್ದರಿಂದ ಆರೋಪಿ ಇದು ಒಮ್ಮತದ ಸೆಕ್ಸ್ ಎಂದು ವಾದಿಸಿದ್ದ.

ಇದನ್ನೂ ಓದಿ: ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್!

(ಕೃಪೆ: ಫ್ರಿಪ್ರೆಸ್ ಜರ್ನಲ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು