ಸೋಮವಾರ, ಮೇ 23, 2022
30 °C

ಒಡಿಶಾ ಕಾಂಗ್ರೆಸ್‌ ಅಧ್ಯಕ್ಷರ ಪದಚ್ಯುತಿಗೆ ಶಾಸಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಒಡಿಶಾದಲ್ಲಿ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ನೀರಸ ಸಾಧನೆ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಿರಂಜನ್‌ ಪಟ್ನಾಯಕ್‌ ಅವರನ್ನು ಪದಚ್ಯುತಿಗೊಳಿಬೇಕು ಎಂದು ಒಡಿಶಾದ ಕಾಂಗ್ರೆಸ್‌ ಶಾಸಕರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಒಂಬತ್ತು ಶಾಸಕರಿದ್ದು, ಈ ಪೈಕಿ ನಾಲ್ವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ಉಳಿಯಬೇಕಾಗಿದೆ. ಇದಕ್ಕಾಗಿ ಪರ್ಯಾಯ ನಾಯಕತ್ವ ಅಗತ್ಯ ಎಂದು ಶಾಸಕರಾದ ತಾರಾಪ್ರಸಾದ್ ಬಹಿನಿಪಟಿ, ಎಸ್‌.ಎಸ್.ಸಲುಜಾ, ಅಧಿಜಾರ್ ಪಾಣಿಗ್ರಾಹಿ, ಮೊಹಮ್ಮದ್‌ ಮೊಕಿಂ ಒತ್ತಾಯಿಸಿದ್ದಾರೆ.

ನಿರಂಜನ್‌ ಪಟ್ನಾಯಕ್‌ ಅವರು ಚುನಾವಣೆ ನಡೆಯುವ ಹೊತ್ತಿನಲ್ಲಿಯೇ ಅನಾರೋಗ್ಯ ಪೀಡಿತರಾಗುತ್ತಾರೆ. ಹೀಗಾಗಿ, ಸದೃಢ ನಾಯಕತ್ವದ ಅಗತ್ಯವಿದೆ ಎಂದು ಶಾಸಕ ಬಹಿನಿಪಾಟಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು