ಶನಿವಾರ, ಜುಲೈ 2, 2022
20 °C

ಕ್ರೀಡೆ, ಸ್ಪರ್ಧೆ ಹಾಗೂ ಹೋರಾಟದ ಬಗ್ಗೆ ರಾಹುಲ್‌ ಭಾಷಣ: ಕಾಂಗ್ರೆಸ್‌ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರೀಡೆ, ಸ್ಪರ್ಧೆ ಹಾಗೂ ಹೋರಾಟದ ಬಗ್ಗೆ ರಾಹುಲ್‌ ಗಾಂಧಿ ಅವರ ಭಾಷಣದ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಕಾಂಗ್ರೆಸ್‌ ಹಂಚಿಕೊಂಡಿರುವ ವಿಡಿಯೊದಲ್ಲಿ ರಾಹುಲ್‌ ಗಾಂಧಿ ಅವರು, 'ನೀವು ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಮೊದಲು ನಿಮ್ಮೊಳಗಿರುವ ಭಯದ ವಿರುದ್ಧ ಹೋರಾಡುತ್ತೀರಿ. ನಿಮ್ಮೊಳಗಿರುವ ಭಯದ ಅನುಭವವನ್ನು ಚೆನ್ನಾಗಿ ತಿಳಿಯಲು ಕ್ರೀಡೆ ನಿಜವಾಗಿಯೂ ಅತ್ಯುತ್ತಮ ವೇದಿಕೆಯಾಗಿದೆ' ಎಂದಿದ್ದಾರೆ.

ಕೇರಳ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಮಲಪ್ಪುರಂನ ಎರ್ನಾಡ್‌ನಲ್ಲಿರುವ 'ಸುಲ್ಲಮುಸ್ಸಲಮ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸ್‌ ಕಾಲೇಜ್‌'ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.

ಐದು ರಾಜ್ಯಗಳ ಚುನಾವಣೆ ಫಲಿತಾಂಶವು ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದತ್ತ ದಾಪುಗಾಲು ಹಾಕಿದ್ದರೆ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಭಾರಿ ಮುನ್ನಡೆ ಸಾಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು