ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ವಿತರಣೆ ದಾಖಲೆ: ಮೋದಿ‌ ಜನ್ಮದಿನವನ್ನು ಅವಕಾಶವಾಗಿ ಪರಿವರ್ತಿಸಿದ ಬಿಜೆಪಿ

Last Updated 18 ಸೆಪ್ಟೆಂಬರ್ 2021, 2:08 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ನಿರ್ವಹಣೆ ಹಾಗೂ ಕುಸಿಯುತ್ತಿರುವ ಆರ್ಥಿಕತೆಗೆ ಸಂಬಂಧಿಸಿ ವ್ಯಾಪಕ ಟೀಕೆಗೆ ಈಡಾಗಿರುವ ಬಿಜೆಪಿ ಸರ್ಕಾರವು, ಇದೀಗ ತನ್ನ ಟ್ರಂಪ್‌ ಕಾರ್ಡ್‌ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿದೆ.

ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ, ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಈ ಹೊತ್ತಿನಲ್ಲಿ ‘ಮೋದಿ ಬ್ರಾಂಡ್‌’ ಬಳಸಿಕೊಂಡು ಪಕ್ಷಕ್ಕೆ ಮತ್ತೆ ಹೊಳಪು ನೀಡಲು ಬಿಜೆಪಿ ನಿರ್ಧರಿಸಿದೆ.

2014, 2019ರ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಪಕ್ಷದ ಗೆಲುವಿಗೆ ಮೋದಿಕಾರಣರಾಗಿದ್ದರು. ಅವರದೇ ಹೆಸರಿನಲ್ಲಿಯೇ ಹಲವು ರಾಜ್ಯಗಳಲ್ಲಿಯೂ ಅಧಿಕಾರ ಹಿಡಿ ಯಲು ಬಿಜೆಪಿಗೆ ಸಾಧ್ಯವಾಗಿತ್ತು. ಆದರೆ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಮಹಾ ರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಹಿನ್ನಡೆ ಹಾಗೂ ಬಿಹಾರದಲ್ಲಿ ಪ್ರಯಾಸದಿಂದ ಗೆಲ್ಲಬೇ ಕಾಗಿ ಬಂದಿದ್ದು ಮೋದಿ ಪ್ರಭಾವಳಿ ಕಡಿಮೆಯಾಗಿದ್ದರ ಸೂಚನೆ ನೀಡಿದ್ದವು.

2024ರಲ್ಲಿಯೂ ಬಿಜೆಪಿಯು ಕೇಂದ್ರ ದಲ್ಲಿ ಅಧಿಕಾರದಲ್ಲಿ ಇರಬೇಕಾದರೆ, ಮುಂಬರಲಿರುವ ರಾಜ್ಯಗಳಲ್ಲಿನ ಚುನಾ
ವಣೆಗಳು ಮಹತ್ವದ್ದಾಗಿವೆ. ಹೀಗಾಗಿ, ಜನ್ಮದಿನ ಆಚರಣೆಯ ನೆಪದಲ್ಲಿ ಮತ್ತೆ ‘ಮೋದಿ ಬ್ರಾಂಡ್‌’ ಅನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಬಿಜೆಪಿ ಕಾರ್ಯಕರ್ತರು ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸುವ ಮೂಲಕ ಶುಕ್ರವಾರ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡರು.

ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ, ‘ನವ ಭಾರತ ಮೇಳ’ ಹೆಸರಿನಲ್ಲಿ ರಕ್ತದಾನ ಶಿಬಿರ, ದೇವಾಲಯ, ಕೆರೆ–ಕಟ್ಟೆ ಹಾಗೂ ನದಿಗಳ ಸ್ವಚ್ಛತೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯ ಸರ್ಕಾರಗಳು ಶುಕ್ರವಾರದಂದು ಮೆಗಾ ಲಸಿಕಾ ಅಭಿಯಾನ ನಡೆಸಿವೆ. ಅದರ ಪರಿಣಾಮವಾಗಿ, ದೇಶದಾದ್ಯಂತ ಸಂಜೆ ಏಳೂವರೆ ಹೊತ್ತಿಗೆ 2.22 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

‘ಇಂದು, ಪ್ರತಿ ಸೆಕೆಂಡಿಗೆ 527 ಡೋಸ್‌ ಲಸಿಕೆ ನೀಡಲಾಗಿದೆ...’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಹೇಳಿದ್ದಾರೆ.

ನಿರುದ್ಯೋಗ ದಿನ

ಮೋದಿ ಅವರ 71ನೇ ಜನ್ಮದಿನದ ನಿಮಿತ್ತ ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಾಚರಣೆ ನಡೆಸಿದರೆ, ಈ ದಿನವನ್ನು ಇಂಡಿಯನ್‌ ಯೂತ್‌ ಕಾಂಗ್ರೆಸ್‌ (ಐಯುಸಿ) ಸದಸ್ಯರು ‌‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT