ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪಡೆದವರಿಗೆ ಮಮತಾ ಭಾವಚಿತ್ರದ ಪ್ರಮಾಣಪತ್ರ

Last Updated 5 ಜೂನ್ 2021, 19:57 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಪಡೆದ, 18ರಿಂದ 44ವರ್ಷ ವಯೋಮಾನದವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾವಚಿತ್ರವಿರುವ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.

‘ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಉತ್ಪಾದಕರಿಂದ ಲಸಿಕೆ ಖರೀದಿಸಿ
ನೀಡುತ್ತಿರುವುದರಿಂದ ಪ್ರಮಾಣಪತ್ರದಲ್ಲಿ ಮುಖ್ಯಮಂತ್ರಿಯ ಚಿತ್ರ ಬಳಸಲಾಗುತ್ತಿದೆ. ಕೆಲವು ರಾಜ್ಯಗಳು ಈಗಾಗಲೇ ಈ ಕ್ರಮ ಜಾರಿ ಮಾಡಿದ್ದರಿಂದ ಇದರಲ್ಲಿ ಅಸ್ವಾಭಾವಿಕವೇನೂ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಸಿಕೆ ಪಡೆಯುವ, 44 ವರ್ಷ ಮೇಲ್ಪಟ್ಟವರಿಗೆ ಮೋದಿ ಅವರ ಭಾವಚಿತ್ರವಿರುವ ಪ್ರಮಾಣಪತ್ರ ನೀಡಲಾಗುತ್ತಿದೆ. ಅದಕ್ಕೂ ಸಣ್ಣ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಲಸಿಕೆ ಪೂರೈಸುತ್ತಿಲ್ಲ. ರಾಜ್ಯವೇ ಹಣ ವೆಚ್ಚ ಮಾಡುವುದರಿಂದ ಮುಖ್ಯಮಂತ್ರಿಯ ಚಿತ್ರ ಬಳಸಲಾಗುತ್ತಿದೆ’ ಎಂದು ವಸತಿ ಸಚಿವ ಫಿರ್ಹಾದ್ ಹಕೀಮ್‌ ಅವರು ಸರ್ಕಾರದ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಹೀಗೆ ಲಸಿಕೆ ಪಡೆದವರಿಗೆ ಕೇಂದ್ರ ಸರ್ಕಾರದಿಂದಲೂ (ಮೋದಿ ಭಾವಚಿತ್ರವಿರುವ) ಪ್ರಮಾಣಪತ್ರ ನೀಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

18–44 ವಯೋಮಾನದವರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಈವರೆಗೆ ಸುಮಾರು ₹150 ಕೋಟಿ ಖರ್ಚು ಮಾಡಿದೆ. 29 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT