ಪ್ರಯಾಣಿಕರನ್ನು ಬಿಟ್ಟು ಹಾರಿದ್ದ ‘ಗೋ ಫಸ್ಟ್’ಗೆ ₹ 10 ಲಕ್ಷ ದಂಡ

ನವದೆಹಲಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದ್ದ ಪ್ರಕರಣಕ್ಕೆ ಸಂಬಂಧಿಸಿ, ‘ಗೋ ಫಸ್ಟ್’ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಶುಕ್ರವಾರ ₹ 10 ಲಕ್ಷ ದಂಡ ವಿಧಿಸಿದೆ.
ಘಟನೆ ಸಂಬಂಧ ಜ.10ರಂದು ಗೋ ಫಸ್ಟ್ ವಿಮಾನ ಯಾನ ಸಂಸ್ಥೆಯ ಅಕೌಂಟೆಬಲ್ ಮ್ಯಾನೇಜರ್‌ಗೆ ಶೋಕಾಸ್ ನೀಡಲಾಗಿತ್ತು. ಜ. 25ರಂದು ವಿಮಾನಯಾನ ಸಂಸ್ಥೆಯು ವರದಿ ಸಲ್ಲಿಸಿತ್ತು. ವರದಿಯನ್ನು ಪರಿಶೀಲಿಸಿದ ನಂತರ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಡಿಜಿಸಿಎ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.