ಬುಧವಾರ, ಮೇ 25, 2022
24 °C

10 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ: ದಂಪತಿಗೆ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

ಕತಕ್‌: 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ ವ್ಯಕ್ತಿಗೆ ಸಾಯುವ ವರೆಗೆ ಜೈಲು ಹಾಗೂ ಆತನ ಪತ್ನಿಗೆ 20 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಒಡಿಶಾದ ಕತಕ್‌ನ ಪೋಕ್ಸೋ ಕೋರ್ಟ್‌ ದಂಪತಿಗೆ ಶಿಕ್ಷೆಯನ್ನು ಘೋಷಿಸಿದೆ. ಆಶಾಗೆ ₹ 5,000 ದಂಡವನ್ನು ವಿಧಿಸಲಾಗಿತ್ತು, ಭರಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ 6 ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿದೆ.

45 ವರ್ಷದ ಅಮಿತ್‌ ಬಿಂಧಾನಿ ಸ್ಲಂ ಪ್ರದೇಶದಿಂದ ಪತ್ನಿ ಆಶಾ ಲೋಹರ್‌ ಸಹಾಯದಿಂದ ಹುಡುಗಿಯನ್ನು ಅಪಹರಿಸಿದ್ದ. ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಬಾಲಕಿಯನ್ನು ಇರಿಸಿದ್ದ ಅಮಿತ್‌ 8 ದಿನಗಳ ಕಾಲ ಅತ್ಯಾಚಾರ ನಡೆಸಿದ್ದ. 2019ರ ಜುಲೈನಲ್ಲಿ ಘಟನೆ ನಡೆದಿತ್ತು. ದಂಪತಿಯನ್ನು ಬಂಧಿಸಿ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದರು.

ಪ್ರಕರಣದಲ್ಲಿ 12 ಸಾಕ್ಷಿದಾರರ ಹೇಳಿಕೆ ಮತ್ತು 20ಕ್ಕೂ ಹೆಚ್ಚು ಸಾಕ್ಷ್ಯವಸ್ತುಗಳನ್ನು ಕೋರ್ಟ್‌ ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಸಂತ್ರಸ್ತ ಬಾಲಕಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಕೋರ್ಟ್‌ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು