ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಬಿಎಸ್‌ ಕೋರ್ಸ್‌ ಭಾಗವಾದ ‘ಪಿಡುಗು ನಿರ್ವಹಣೆ’ ವಿಷಯ

Last Updated 28 ಆಗಸ್ಟ್ 2020, 12:20 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ನಂಥ ಪಿಡುಗಿನ ಸಂದರ್ಭದಲ್ಲಿ ಉದ್ಭವಿಸುವ ಸವಾಲುಗಳನ್ನು ವೈದ್ಯರು ಸೂಕ್ತವಾಗಿ ಎದುರಿಸಬೇಕು ಎನ್ನುವ ಕಾರಣದಿಂದ ಎಂಬಿಬಿಎಸ್‌ ಪಠ್ಯಕ್ರಮದಲ್ಲಿ ‘ಪಿಡುಗು ನಿರ್ವಹಣೆ’ ಎನ್ನುವ ವಿಷಯವನ್ನೂ ಸೇರಿಸಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿರ್ಧರಿಸಿದೆ.

ಹೀಗಾಗಿ ಮುಂದೆ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಇರಲಿರುವ ಪಿಡುಗು ನಿರ್ವಹಣೆ ತರಬೇತಿ ವಿಷಯದ ಮಾಹಿತಿಯನ್ನು ಎಂಸಿಐನ ತಜ್ಞರ ತಂಡ ಹಾಗೂ ಉಪನ್ಯಾಸಕರು ಸಿದ್ಧಪಡಿಸಿದ್ದಾರೆ.

‘ಅನಾರೋಗ್ಯಕ್ಕೆ ಚಿಕಿತ್ಸೆ ಮಾತ್ರವಲ್ಲದೆ, ಪಿಡುಗಿನ ಸಂದರ್ಭದಲ್ಲಿ ಉದ್ಭವಿಸುವ ಸಾಮಾಜಿಕ, ಕಾನೂನು ಹಾಗೂ ಇತರೆ ಸಮಸ್ಯೆಗಳನ್ನೂ ಎದುರಿಸಬಲ್ಲ ಸಾಮರ್ಥ್ಯ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಕೋವಿಡ್‌–19 ಪಿಡುಗಿನ ಹುಟ್ಟು ಹಾಗೂ ಅದು ವಿಶ್ವದಾದ್ಯಂತ ವ್ಯಾಪಿಸಿದ ಬಗೆಯು, ಇಂಥ ತರಬೇತಿಯ ಅಗತ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಬೋರ್ಡ್‌ ಆಫ್‌ ಗವರ್ನರ್ಸ್‌ನ ಮುಖ್ಯಸ್ಥ ಡಾ.ವಿ.ಕೆ.ಪೌಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT