ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | ದೇಶದಲ್ಲಿ 63 ಲಕ್ಷ ಕೋವಿಡ್‌ ಸೋಂಕಿತರು ಗುಣಮುಖ

Last Updated 15 ಅಕ್ಟೋಬರ್ 2020, 5:48 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 67,708 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಂದೇ ದಿನ 680 ಸೋಂಕಿತರು ಮೃತಪಟ್ಟಿದ್ದಾರೆ.

ದೇಶದ ಒಟ್ಟು ಸೋಂಕಿತರರ ಸಂಖ್ಯೆ 73,07,098ಕ್ಕೆ ಏರಿಕೆಯಾಗಿದ್ದು 63,83,442 ಕೋವಿಡ್‌ ಸೋಂಕು ಪೀಡಿತರು ಗುಣಮುಖರಾಗಿದ್ದಾರೆ. ಒಟ್ಟಾರೆ 8,26,876 ಸೋಂಕಿತರು ದೇಶದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ವರೆಗೂ ಕೋವಿಡ್‌ನಿಂದ 1,11,266 ಜನರು ಮೃತಪಟ್ಟಿದ್ದಾರೆ.

ಅಕ್ಟೋಬರ್ 14ರವರೆಗೆ ಒಟ್ಟು9,12,26,305 ಸ್ಯಾಂಪಲ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬುಧವಾರ (ಅ.14) ಒಂದೇ ದಿನ 11,36,183 ಸ್ಯಾಂಪಲ್‌ಗಳನ್ನು ತಪಾಸಣೆ ಮಾಡಲಾಗಿದೆ.

2021ರ ಜೂನ್‌ ಅಥವಾ ಜುಲೈ ವೇಳೆಗೆ 40ರಿಂದ 50 ಕೋಟಿಯಷ್ಟು ಲಸಿಕೆ ವಿತರಣೆ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಈಗಾಗಲೇ ಲಸಿಕೆ ತಯಾರಿಕೆಯ ಬ್ಲೂಪ್ರಿಂಟ್‌ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಲಸಿಕೆ ವಿತರಣೆ ಕುರಿತಂತೆ ವೈದ್ಯರು ಮತ್ತು ಸಚಿವರ ತಂಡ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಅಂತಿಮ ರೂಪರೇಷೆಯನ್ನು ಸಿದ್ಧ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT