ನವದೆಹಲಿ: ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 8,318 ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, 465 ಮಂದಿ ಮೃತಪಟ್ಟಿದ್ದಾರೆ.

10,967 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 3,39,88,797 ತಲುಪಿದೆ. ಒಟ್ಟು 4,67,933 ಮಂದಿ ಸೋಂಕಿತರು ಅಸುನೀಗಿದ್ದಾರೆ ಎಂಬುದು ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಓದಿ:ಧಾರವಾಡ ಎಸ್ಡಿಎಂನಲ್ಲಿ ಕೋವಿಡ್ ಸ್ಫೋಟ: ಸೋಂಕು ಹರಡಿದ್ದು ಎಲ್ಲಿಂದ?

ಸದ್ಯ ದೇಶದಲ್ಲಿ 1,07,019 ಸಕ್ರಿಯ ಪ್ರಕರಣಗಳಿವೆ. ಈವರೆಗೆ ದೇಶದಾದ್ಯಂತ 63.82 ಕೋಟಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. 121.06 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ಈ ಮಧ್ಯೆ, ದೇಶದಲ್ಲಿ ಸದ್ಯದ ಕೋವಿಡ್ ಪರಿಸ್ಥಿತಿ ಮತ್ತು ಲಸಿಕಾ ಅಭಿಯಾನದ ಬಗ್ಗೆ ಅವಲೋಕನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಳಿಗ್ಗೆ 10.30ಕ್ಕೆ ಸಭೆ ನಡೆಸಲಿದ್ದಾರೆ.

ಇನ್ನಷ್ಟು...

ಕೊರೊನಾವೈರಸ್ನ ಹೊಸ ತಳಿ: ಹಲವು ದೇಶಗಳಿಗೆ ಹರಡಿದ ‘ಓಮಿಕ್ರಾನ್’; ತೀವ್ರ ಕಳವಳ

ಲಸಿಕೆ ಪಡೆದುಕೊಂಡಿದ್ದವರಿಗೂ ಕೋವಿಡ್; ಆಫ್ರಿಕಾ ತಳಿ ತಡೆಯುವುದೇ ಲಸಿಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.