ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಒಟ್ಟು 94.62 ಲಕ್ಷ ಸೋಂಕಿತರು, ಯಾವ ರಾಜ್ಯದಲ್ಲೆಷ್ಟು?

Last Updated 1 ಡಿಸೆಂಬರ್ 2020, 16:29 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 31,118 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 482 ಮಂದಿ ಮೃತಪಟ್ಟಿದ್ದು, 41,985 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 94,62,810 ತಲುಪಿದೆ. ಈವರೆಗೆ 1,37,621 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 88,89,585 ಮಂದಿ ಗುಣಮುಖರಾಗಿದ್ದಾರೆ.

ಸದ್ಯ ದೇಶದಲ್ಲಿ 4,35,603 ಸಕ್ರಿಯ ಪ್ರಕರಣಗಳಿವೆ.

ತಮಿಳುನಾಡಿನಲ್ಲಿ 1,404 ಹೊಸ ಪ್ರಕರಣ

ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,404 ಪ್ರಕರಣಗಳು ವರದಿಯಾಗಿದ್ದು, 1,411 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,83,319ಕ್ಕೆ ಏರಿಕೆಯಾಗಿದ್ದು, ಈವರೆಗೂ 11,722 ಜನರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ 4,930 ಹೊಸ ಪ್ರಕರಣ

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 4,930 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 6,290 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 95 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆಯು 18,28,826 ಜನರಿಗೆ ಸೋಂಕು ತಗುಲಿದ್ದು, 89,098 ಸಕ್ರಿಯ ಪ್ರಕರಣಗಳಿವೆ. ಮೃತರ ಸಂಖ್ಯೆಯು 47,246ಕ್ಕೆ ಏರಿಕೆಯಾಗಿದೆ.

ಆಂಧ್ರದಲ್ಲಿ ಕೇವಲ 685 ಹೊಸ ಪ್ರಕರಣ

ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 685 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,68,749ಕ್ಕೆ ಏರಿಕೆಯಾಗಿದೆ. 7,427 ಸಕ್ರಿಯ ಪ್ರಕರಣಗಳೊಂದಿಗೆ 8,54,326 ಜನರು ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 6,996ಕ್ಕೆ ಏರಿಕೆಯಾಗಿದೆ.

ಇನ್ನುಳಿದಂತೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 4,006, ಛಂಡೀಗಡದಲ್ಲಿ 128, ಪಂಜಾಬ್‌ನಲ್ಲಿ 630, ಮಧ್ಯ ಪ್ರದೇಶದಲ್ಲಿ 1,357, ಮಣಿಪುರದಲ್ಲಿ 198, ರಾಜಸ್ಥಾನದಲ್ಲಿ 2,347, ಉತ್ತರಾ ಖಂಡದಲ್ಲಿ 473 ಮತ್ತು ಕೇರಳದಲ್ಲಿ 5,375 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT