ಭಾನುವಾರ, ನವೆಂಬರ್ 1, 2020
19 °C

Covid-19 India Update| 1 ಕೋಟಿಗೂ ಅಧಿಕ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಪಯಣ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ 24 ಗಂಟೆಗಳಲ್ಲಿ ವರದಿಯಾಗಿರುವ 75,083 ಕೋವಿಡ್‌ ಪ್ರಕರಣಗಳನ್ನೂ ಒಳಗೊಂಡಂತೆ ಭಾರತದ ಒಟ್ಟು ಸೋಂಕಿತರ ಸಂಖ್ಯೆ ಮಂಗಳವಾರ 55 ಲಕ್ಷ ದಾಟಿದೆ.

ಇನ್ನು ಈ 24 ಗಂಟೆಗಳಲ್ಲಿ 1053 ಮಂದಿ ಕೋವಿಡ್‌ನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಇದರೊಂದಿಗೆ ಕೊರೊನಾ ವೈರಸ್‌ ಸೋಂಕಿಗೆ ಈ ವರೆಗೆ ದೇಶದಲ್ಲಿ 88,935 ಮಂದಿ ಪ್ರಾಣ ತೆತ್ತಂತಾಗಿದೆ.

ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ತವರು ರಾಜ್ಯಗಳತ್ತ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹೇರಿಕೆಯಾದ ಲಾಕ್‌ಡೌನ್ ಸಮಯದಲ್ಲಿ 2020ರ ಮಾರ್ಚ್-ಜೂನ್ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಇದರಲ್ಲಿ ಪ್ರಯಾಣಿಸಿದವರು ಸೇರಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಭಾರತದಲ್ಲಿ ಸಕ್ರೀಯ ಕೋವಿಡ್‌ ಪ್ರಕರಣಗಳಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ಈಗ ದೇಶದಲ್ಲಿ 9,75,861 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. 44,97,868 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಈ ವರೆಗೆ 6,53,25,779 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಿರುವುದಾಗಿ ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಎಸಿಎಂಆರ್‌) ತಿಳಿಸಿದೆ. ಸೋಮವಾರ 9,33,185 ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಅದು ಹೇಳಿದೆ.

ಕಳೆದ ಮೂರು ದಿನಗಳಿಂದ ದೇಶದಲ್ಲಿ ದಿನವೊಂದರಲ್ಲಿ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳಿಗಿಂತಲೂ, ಬಿಡುಗಡೆಯಾಗುತ್ತಿರುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಮೂರು ದಿನಗಳಿಂದಲೂ ದಿನಂಪ್ರತಿ 90 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿ ಮನೆಗಳಿಗೆ ಹಿಂದಿರುಗುತ್ತಿದ್ದಾರೆ. ಆದರೆ, ಮೂರು ದಿನಗಳಿಂದ 90 ಸಾವಿರಕ್ಕಿಂತಲೂ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಮಹಾರಾಷ್ಟ್ರದಲ್ಲಿ 18,390 ಹೊಸ ಪ್ರಕರಣ

ದೇಶದ ಕೋವಿಡ್ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ 18,390 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 12,42,770ಕ್ಕೆ ತಲುಪಿದೆ. ಇಂದು 20,206 ಜನರು ಗುಣಮುಖರಾಗಿದ್ದು, ಒಟ್ಟಾರೆ 9,36,554 ಜನರು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣವು ಶೇ 75.36ರಷ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 392 ಜನರು ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕಿತರು

ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 3,182 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 3,047 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 62 ಜನರಿಂದು ಸಾವಿಗೀಡಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆಯು 2,31,484ಕ್ಕೆ ತಲುಪಿದ್ದು, 24,971 ಸಕ್ರಿಯ ಪ್ರಕರಣಗಳೊಂದಿಗೆ 4,483 ಜನರು ಮೃತಪಟ್ಟಿದ್ದಾರೆ.

ರಾಜಧಾನಿ ದೆಹಲಿಯಲ್ಲಿ 3,816 ಹೊಸ ಪ್ರಕರಣ

ದೆಹಲಿಯಲ್ಲಿಂದು ಹೊಸದಾಗಿ 3,816 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 2,53,075ಕ್ಕೆ ಏರಿಕೆಯಾಗಿದೆ. ಈ ಪೈಕಿ 2,16,401 ಜನರು ಗುಣಮುಖರಾಗಿದ್ದರೆ, 5,051 ಜನರು ಸಾವಿಗೀಡಾಗಿದ್ದಾರೆ. 31,623 ಸಕ್ರಿಯ ಪ್ರಕರಣಗಳಿವೆ.

ತಮಿಳುನಾಡಿನಲ್ಲಿ 5,406 ಮಂದಿ ಗುಣಮುಖ
ಕಳೆದ 24 ಗಂಟೆಗಳಲ್ಲಿ 5,406 ಜನರು ಗುಣಮುಖಾರುಗುವುದರೊಂದಿಗೆ 5,337 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 76 ಜನರು ಸಾವಿಗೀಡಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆಯು 5,52,674ಕ್ಕೆ ತಲುಪಿದ್ದು, 46,350 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,97,377 ಜನರು ಗುಣಮುಖರಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು