ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Updetes | ಮಹಾರಾಷ್ಟ್ರದಲ್ಲಿ 2,936 ಹೊಸ ಪ್ರಕರಣ, 50 ಜನ ಸಾವು

Last Updated 12 ಜನವರಿ 2021, 15:31 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ24 ಗಂಟೆಗಳಲ್ಲಿ 18,385 ಮಂದಿ ಗುಣಮುಖರಾಗಿದ್ದು, ದೇಶದಾದ್ಯಂತ ಈ ಒಂದು ದಿನದಲ್ಲಿ 167 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.

ಜ.11ರ ಹೊತ್ತಿಗೆ ದೇಶದಲ್ಲಿ 18,26,52,887 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಮವಾರ ಒಂದೇ ದಿನ 8,97,056 ಮಾದರಿಗಳು ಪರೀಕ್ಷೆಗೆ ಒಳಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

ಆಂಧ್ರ ಪ್ರದೇಶದಲ್ಲಿ197 ಹೊಸ ಪ್ರಕರಣ

ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ197 ಹೊಸ ಪ್ರಕರಣಗಳು ಪತ್ತೆಯಾಗಿದ್ದು,234 ಜನರು ಗುಣಮುಖರಾಗಿದ್ದಾರೆ ಮತ್ತು ಇಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ8,85,234ಕ್ಕೆ ತಲುಪಿದೆ. ಒಟ್ಟು8,75,690 ಜನರು ಗುಣಮುಖರಾಗಿದ್ದಾರೆ. ಸದ್ಯ2,411 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ2,936 ಹೊಸ ಪ್ರಕರಣ

ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ2,936 ಹೊಸ ಪ್ರಕರಣಗಳು ವರದಿಯಾಗಿದ್ದು,3,282 ಜನರು ಗುಣಮುಖರಾಗಿದ್ದಾರೆ ಮತ್ತು50 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ19,74,488ಕ್ಕೆ ಏರಿಕೆಯಾಗಿದ್ದರೆ,18,71,270 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ50,151 ಜನರು ಈವರೆಗೆ ಸಾವಿಗೀಡಾಗಿದ್ದಾರೆ. ಸದ್ಯ51,892 ಸಕ್ರಿಯ ಪ್ರಕರಣಗಳಿವೆ.

ಮಣಿಪುರ:28 ಜನ ಗುಣಮುಖ

ಮಣಿಪುರದಲ್ಲಿ ಹೊಸದಾಗಿ 32 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು,28 ಜನರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ28,725ಕ್ಕೆ ತಲುಪಿದ್ದು, ಈ ಪೈಕಿ27,879 ಜನರು ಗುಣಮುಖರಾಗಿದ್ದಾರೆ ಮತ್ತು365 ಜನರು ಮೃತಪಟ್ಟಿದ್ದಾರೆ. ಸದ್ಯ481 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ ಕೋವಿಡ್‌ (ಇಂದಿನ ಮಾಹಿತಿ)

-ಒಟ್ಟು ಪ್ರಕರಣಗಳು: 1,04,79,179

-ಸಕ್ರಿಯ ಪ್ರಕರಣಗಳು: 2,16,558

-ಈ ವರೆಗೆ ಗುಣಮುಖರಾದವರು: 1,01,11,294

-ಒಟ್ಟು ಸಾವಿನ ಸಂಖ್ಯೆ: 1,51,327

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT