ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 7 ರಿಂದ 13ರ ಅವಧಿಯಲ್ಲಿ ಕೋವಿಡ್‌ ಪ್ರಸರಣ ಸೂಚ್ಯಂಕ 2.2ಕ್ಕೆ ಇಳಿಕೆ

ಐಐಟಿ–ಮದ್ರಾಸ್‌ ತಜ್ಞರ ವಿಶ್ಲೇಷಣೆ
Last Updated 16 ಜನವರಿ 2022, 12:48 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19 ಎಷ್ಟು ವೇಗವಾಗಿ ಪ್ರಸರಣಗೊಳ್ಳುತ್ತದೆ ಎಂಬುದರ ಸೂಚ್ಯಂಕವಾದ ‘ಆರ್‌–ವ್ಯಾಲ್ಯೂ’ ಜ. 7 ರಿಂದ 13ರ ಮಧ್ಯೆ 2.2ರಷ್ಟು ದಾಖಲಾಗಿತ್ತು. ಹಿಂದಿನ ಎರಡು ವಾರಗಳ ಅವಧಿಗೆ ಹೋಲಿಸಿದಾಗ ಈ ಸೂಚ್ಯಂಕದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಐಐಟಿ–ಮದ್ರಾಸ್‌ನ ಸಂಶೋಧಕರು ಹೇಳಿದ್ದಾರೆ.

ಈ ಕುರಿತು ಪ್ರಾಥಮಿಕ ವಿಶ್ಲೇಷಣೆ ನಡೆಸಿದ್ದು, ಜ. 7ಕ್ಕೂ ಹಿಂದಿನ ಎರಡು ವಾರಗಳ ಅವಧಿಯಲ್ಲಿ ಈ ಸೂಚ್ಯಂಕ ಕ್ರಮವಾಗಿ 4 (ಜ.1 ರಿಂದ 6) ಹಾಗೂ 2.9 (ಡಿಸೆಂಬರ್ 25–31)) ಇತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಐಐಟಿಯ ಗಣಿತ ವಿಭಾಗದ ಪ್ರಾಧ್ಯಾಪಕರಾದ ನೀಲೇಶ್ ಎಸ್‌.ಉಪಾಧ್ಯೆ ಹಾಗೂ ಎಸ್‌.ಸುಂದರ್‌ ನೇತೃತ್ವದ ತಂಡ ಈ ವಿಶ್ಲೇಷಣೆ ನಡೆಸಿದೆ.

ಕೋವಿಡ್‌ ಪೀಡಿತರು ಎಷ್ಟು ಜನರಿಗೆ ಸೋಂಕನ್ನು ಪ್ರಸರಣ ಮಾಡುತ್ತಾರೆ ಎಂಬುದನ್ನು ‘ಆರ್‌–ವ್ಯಾಲ್ಯೂ’ ಸೂಚಿಸುತ್ತದೆ. ಈ ‘ಆರ್‌–ವ್ಯಾಲ್ಯೂ’ 1ಕ್ಕಿಂತ ಕಡಿಮೆಯಾದರೆ, ಪಿಡುಗು ಕೊನೆಯಾಯಿತು ಎಂಬುದಾಗಿ ಪರಿಗಣಿಸಲಾಗುತ್ತದೆ.

‘ಪ್ರಸರಣದ ಸಂಭವನೀಯತೆ, ಇತರರು ಸೋಂಕಿತನೊಂದಿಗೆ ಸಂಪರ್ಕಕ್ಕೆ ಬರುವ ದರ ಹಾಗೂ ಸೋಂಕು ತಗುಲಲು ಬೇಕಾದ ಸಮಯವನ್ನು ಈ ಆರ್‌ ವ್ಯಾಲ್ಯೂ ಅವಲಂಬಿಸಿರುತ್ತದೆ’ ಎಂದು ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT