ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ‘ಬಿ.1.617’ ರೂಪಾಂತರ ಭಾರತದ್ದಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Last Updated 12 ಮೇ 2021, 10:16 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಗೆ ಕಾರಣವಾಗಿರುವ ಕೊರನಾ ವೈರಸ್ ರೂಪಾಂತರವು ಭಾರತದ್ದು ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

‘ಬಿ.1.617’ ಅನ್ನು ಭಾರತೀಯ ರೂಪಾಂತರ ಎಂದು ಉಲ್ಲೇಖಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಆ ರೀತಿ ಉಲ್ಲೇಖಿಸಿಲ್ಲ. ರೂಪಾಂತರ ವೈರಸ್ ಜಾಗತಿಕ ಕಳವಳಕ್ಕೆ ಸಂಬಂಧಿಸಿದ್ದು
ಎಂದು ಡಬ್ಲ್ಯುಎಚ್‌ಒ ಮಂಗಳವಾರ ಹೇಳಿರುವುದಾಗಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ತನ್ನ 32 ಪುಟಗಳ ದಾಖಲೆಯಲ್ಲಿ ‘ಬಿ.1.617’ ಭಾರತದ ರೂಪಾಂತರ ಎಂದು ಉಲ್ಲೇಖಿಸಿಲ್ಲ. ಭಾರತೀಯ ರೂಪಾಂತರ ಎಂಬ ಪದವನ್ನೂ ಬಳಸಿಲ್ಲ. ಈ ರೂಪಾಂತರವು ಜಾಗತಿಕ ಕಳವಳಕ್ಕೆ ಸಂಬಂಧಿಸಿದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದಾಗಿ ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ ಕೆಲವು ವರದಿಗಳಲ್ಲಿ ಅದನ್ನು ಭಾರತೀಯ ರೂಪಾಂತರ ಎಂದೂ ಉಲ್ಲೇಖಿಸಲಾಗಿದೆ. ಈ ವರದಿಗಳಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT