ಮಂಗಳವಾರ, ಮೇ 18, 2021
30 °C

4 ರಾಜ್ಯಗಳಲ್ಲಿ ಕೋವಿಡ್ ಉಲ್ಬಣ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾರಾಷ್ಟ್ರ, ಪಂಜಾಬ್, ಛತ್ತೀಸಗಡ ಹಾಗೂ ಮಧ್ಯಪ್ರದೇಶದಲ್ಲಿ ಕೋವಿಡ್–19 ಪ್ರಕರಣಗಳು  ಕೆಲವು ದಿನಗಳಿಂದ ಏರುಗತಿಯಲ್ಲಿವೆ. ಈ ಮಧ್ಯೆ ಕೇರಳದಲ್ಲಿ ನಿತ್ಯವೂ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಕಳವಳ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದಲ್ಲಿ ಏರುಗತಿಯಲ್ಲಿದ್ದ ಪ್ರಕರಣಗಳು ನವೆಂಬರ್–ಡಿಸೆಂಬರ್ ವೇಳೆಗೆ ಕಡಿಮೆಯಾಗಲು ಆರಂಭಿಸಿ, ಫೆಬ್ರುವರಿ ಮಧ್ಯಭಾಗದವರೆಗೂ ಇಳಿಕೆಯಾಗುತ್ತಲೇ ಇದ್ದವು. ಆದರೆ ಫೆ.16ರಿಂದ ಈ ಸಂಖ್ಯೆ ಮತ್ತೆ ಏರುಮುಖವಾಗಿದೆ. ಜನವರಿ 1ರ ಬಳಿಕ ಶನಿವಾರ 6 ಸಾವಿರ ಪ್ರಕರಣ ಪತ್ತೆಯಾಗಿದೆ.

ಪಂಜಾಬ್‌ನಲ್ಲೂ ಫೆಬ್ರುವರಿ ಆರಂಭದಿಂದ ಪ್ರತಿನಿತ್ಯ ಸುಮಾರು 400 ಪ್ರಕರಣಗಳು ಹೊರಬರುತ್ತಿವೆ. ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಏರಿಕೆ ಕಂಡುಬಂದಿದೆ.

ಕೇರಳದಲ್ಲಿ ಸದ್ಯ ಪ್ರಕರಣಗಳು ಇಳಿಮುಖವಾಗಿವೆ. ಆದರೆ ಮಹಾರಾಷ್ಟ್ರ ಹೊರತುಪಡಿಸಿದರೆ ಅತಿಹೆಚ್ಚು ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗುತ್ತಿವೆ. 24 ಗಂಟೆಯಲ್ಲಿ ಇಲ್ಲಿ 4,500 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ.  

ಫೆಬ್ರವರಿ 20ರವರೆಗಿನ ಮಾಹಿತಿ ಪ್ರಕಾರ, ಶೇ 35ಕ್ಕಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯ ಮೊದಲ ಡೋಸ್‌ ಪಡೆದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು