ಭಾನುವಾರ, ಜೂನ್ 20, 2021
20 °C

ರಾಜ್ಯ ಸರ್ಕಾರಗಳಿಗೆ ಅಗತ್ಯ ಬೆಂಬಲ ನೀಡಿ: ಪ್ರಧಾನಿಗೆ ಜಿ.ಸಿ. ಚಂದ್ರಶೇಖರ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಬಹುಸಂಖ್ಯೆಯಲ್ಲಿರುವ 18ರಿಂದ 44ರ ವಯೋಮಾನದವರನ್ನು ಕೋವಿಡ್‌–19 ಅಪಾಯದಿಂದ ಪಾರು ಮಾಡುವ ನಿಟ್ಟಿನಲ್ಲಿ ಲಸಿಕೆ ಹಾಕಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಗತ್ಯ ಬೆಂಬಲ ನೀಡಬೇಕು ಎಂದು ರಾಜ್ಯಸಭೆಯ ಸದಸ್ಯ, ಕಾಂಗ್ರೆಸ್‌ನ ಜಿ.ಸಿ. ಚಂದ್ರಶೇಖರ್‌ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಲಸಿಕೆ ಅಭಿಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಲಹೆ ನೀಡಿರುವ ಅವರು, ಲಸಿಕೆ ಹಾಕಿಸಿಕೊಳ್ಳಲು ಅಗತ್ಯವಿರುವ ನೋಂದಣಿಗಾಗಿ ಸಿದ್ಧಪಡಿಸಿರುವ ಆ್ಯಪ್‌ ಬಳಕೆದಾರ ಸ್ನೇಹಿಯೂ, ವಿಶ್ವಾಸಾರ್ಹವಾಗಿಯೂ ಇರಬೇಕು. ಯಾವುದೇ ಸಂದರ್ಭದಲ್ಲಿ ಈ ಆ್ಯಪ್‌ ಜಾಮ್‌ ಆಗದಂತೆ ನೋಡಿಕೊಳ್ಳಬೇಕು. ಆಯಾ ರಾಜ್ಯ ಸರ್ಕಾರಗಳು ಪ್ರತ್ಯೇಕ ಆ್ಯಪ್‌ ಹೊಂದಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಲಸಿಕೆಯ ಮೊದಲ ಡೋಸ್‌ ಪಡೆದವರಿಗೆ ದ್ವಿತೀಯ ಡೋಸ್‌ ಸುಲಭವಾಗಿ ಸಿಗುವಂತಾಗಬೇಕು. ಗ್ಲೋಬಲ್‌ ಟೆಂಡರ್‌ ಮೂಲಕ ಬೇರೆ ದೇಶಗಳಿಂದ ಲಸಿಕೆ ಖರೀದಿಸಲು ಅವಕಾಶ ನೀಡಬೇಕು. ಈ ಸಂಬಂಧ ಆಯಾ ರಾಜ್ಯ ಸರ್ಕಾರಗಳಿಗೆ ಆಗಲಿರುವ ಆರ್ಥಿಕ ಹೊರೆಯನ್ನು ನೀಗಿಸಲು ಪಿ.ಎಂ. ಕೇರ್ಸ್‌ ನಿಧಿಯಿಂದ ನೆರವು ನೀಡಬೇಕು. ಖಾಸಗಿ ಮಾರುಕಟ್ಟೆಯಿಂದ ಲಸಿಕೆ ಖರೀದಿಸುವ ಅನಿವಾರ್ಯತೆಗೆ ಜನರನ್ನು ನೂಕದೆ, ಇತರ ದೇಶಗಳಂತೆಯೇ ಭಾರತದ ಜನತೆಗೂ ಉಚಿತವಾಗಿ ಲಸಿಕೆ ದೊರೆಯುವಂತಾಗಬೇಕು. ವಿವಿಧ ಕಂಪನಿಗಳು ತಯಾರಿಸಿರುವ ಲಸಿಕೆಯು ವಾಣಿಜ್ಯ ಉತ್ಪನ್ನವಾಗಿ ಬದಲಾಗುವ ಸಂಭವೀಯ ಅಪಾಯವನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು