ನವದೆಹಲಿ: ಕೋವಿಡ್–19 ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರುವುದು ಪಂಜಾಬ್ ಪೊಲೀಸ್ ಸಿಬ್ಬಂದಿಯಲ್ಲಿ ಸಾವಿನ ಸಂಭಾವ್ಯತೆಯನ್ನು ಶೇ 98ರಷ್ಟು ಕಡಿಮೆ ಮಾಡಿದೆ ಎಂದು ಪಿಜಿಐ ಚಂಡೀಗಡ ಮತ್ತು ಪಂಜಾಬ್ ಸರ್ಕಾರ ನಡೆಸಿರುವ ಅಧ್ಯಯನ ಉಲ್ಲೇಖಿಸಿ ನೀತಿ ಆಯೋಗದ ಸದಸ್ಯ ವಿನೋದ್ ಪಾಲ್ ತಿಳಿಸಿದ್ದಾರೆ.

ಲಸಿಕೆಯ ಒಂದು ಡೋಸ್ ಪಡೆದವರಲ್ಲಿ ಸಾವಿನ ಸಂಭಾವ್ಯತೆ ಶೇ 92ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

ಓದಿ:ಡೆಲ್ಟಾ ರೂಪಾಂತರ ವಿರುದ್ಧವೂ ಕೊವ್ಯಾಕ್ಸಿನ್ ಪರಿಣಾಮಕಾರಿ: ಅಂತಿಮ ವರದಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಲಸಿಕೆ ಪಡೆಯದ 4,868 ಸಿಬ್ಬಂದಿಯ ಪೈಕಿ 15 ಮಂದಿ ಕೋವಿಡ್‌ನಿಂದ ಮೃತಪಟ್ಟಿರುವುದು ತಿಳಿದುಬಂದಿದೆ. ಒಂದು ಡೋಸ್ ಲಸಿಕೆ ಪಡೆದ 35,856 ಸಿಬ್ಬಂದಿಯ ಪೈಕಿ 9 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 42,720 ಸಿಬ್ಬಂದಿ ಲಸಿಕೆಯ ಎರಡೂ ಡೋಸ್ ಪಡೆದಿದ್ದು, ಈ ಪೈಕಿ ಇಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಪೊಲೀಸರಿಗೆ ಸೋಂಕು ತಗಲುವ ಅಪಾಯ ಹೆಚ್ಚಿದೆ. ಇವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಲಸಿಕೆಯ ಒಂದು ಡೋಸನ್ನೂ ಪಡೆಯದವರಲ್ಲಿ ಸಾವಿರಕ್ಕೆ ಮೂರು ಸಾವು ಸಂಭವಿಸಿದರೆ ಕನಿಷ್ಠ ಒಂದು ಡೋಸ್ ಪಡೆದವರಲ್ಲಿ ಸಾವಿನ ಪ್ರಮಾಣ ಸಾವಿರಕ್ಕೆ 0.25ರಷ್ಟಿದೆ ಎಂದು ಪಾಲ್ ತಿಳಿಸಿದ್ದಾರೆ.

ಓದಿ:ಕೋವ್ಯಾಕ್ಸಿನ್ ಲಸಿಕೆಯಲ್ಲಿ ಅಮೆರಿಕದ ಪ್ರತಿರೋಧಕ

ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ ಸಾವಿನ ಸಂಭಾವ್ಯತೆ ಬಹುತೇಕ ಇಲ್ಲವಾಗಿದೆ. ಸಾವಿರಕ್ಕೆ 0.05ರಷ್ಟಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.