ನವದೆಹಲಿ: ಫೈಝರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ಗುಣಪಡಿಸುವ ಮಾತ್ರೆ ‘ಪ್ಯಾಕ್ಸ್ಲೋವಿಡ್’ ಅನ್ನು ಕಡಿಮೆ ದರದಲ್ಲಿ ಭಾರತವೂ ಸೇರಿದಂತೆ 95 ದೇಶಗಳಲ್ಲಿ ಮಾರಾಟ ಮಾಡಲು ಆ ಸಂಸ್ಥೆಯು ಅನುಮತಿ ಕೊಟ್ಟಿದೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಈ ಔಷಧವನ್ನು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆ ಬೆಂಬಲಿತ ಸಾರ್ವಜನಿಕ ಆರೋಗ್ಯ ಸಂಘಟನೆ (ಎಂಪಿಪಿ) ಜೊತೆ ಫೈಝರ್ ಸಂಸ್ಥೆಯು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಫೈಝರ್ನ ಪ್ರಾಯೋಗಿಕ ಹಂತದಲ್ಲಿರುವ ಈ ಮಾತ್ರೆಗಳನ್ನು ರಿಟೊನಾವಿರ್ ಎಂಬ ಇನ್ನೊಂದು ಔಷಧದ ಸಂಯೋಜನೆಯೊಂದಿಗೆ ಪೂರೈಸಲು, ಜಗತ್ತಿನಾದ್ಯಂತ ಅರ್ಹ ಔಷಧ ತಯಾರಕರಿಗೆ ಪರವಾನಗಿಗಳನ್ನು ನೀಡಲಾಗುತ್ತದೆ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. 95ಕ್ಕೂ ಹೆಚ್ಚು ದೇಶಗಳಿಗೆ ಇವುಗಳನ್ನು ಪೂರೈಸುವುದರಿಂದ ಜಗತ್ತಿನ ಜನಸಂಖ್ಯೆಯ ಶೇ 53ರಷ್ಟು ಜನರನ್ನು ಈ ಔಷಧ ತಲುಪುವ ನಿರೀಕ್ಷೆಯಿದೆ.

ಔಷಧ ತಯಾರಿಕಾ ಸಂಸ್ಥೆ ಮೆರ್ಕ್ ಪ್ರಾಯೋಗಿಕವಾಗಿ ಸಿದ್ಧಪಡಿಸಿರುವ ‘ಮೊಲ್ನುಪಿರವಿರ್’ ಎಂಬ ಔಷಧವನ್ನು ಭಾರತವೂ ಒಳಗೊಂಡಂತೆ 105 ದೇಶಗಳಿಗೆ ಒದಗಿಸುವ ಸಂಬಂಧ ಎರಡು ವಾರಗಳ ಹಿಂದಷ್ಟೇ ಎಂಪಿಪಿ ಒಪ್ಪಂದ ಮಾಡಿಕೊಂಡಿತ್ತು.

ಈ ಎರಡೂ ಔಷಧಗಳು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯದಿಂದ ಅನುಮತಿ ಪಡೆದಿಲ್ಲ.ಮೊಲ್ನುಪಿರವಿರ್ಗೆ ಬ್ರಿಟನ್ ಇತ್ತೀಚೆಗೆ ಅನುಮತಿ ನೀಡಿದೆ. ಭಾರತದಲ್ಲಿ ಇದು ಪರಿಶೀಲನೆಯ ಹಂತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.