ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ತಿಂಗಳು ಕೋವಿಡ್‌ 3ನೇ ಅಲೆ? ಎಸ್‌ಬಿಐ–ರಿಸರ್ಚ್‌ನ ವರದಿ

Last Updated 5 ಜುಲೈ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ರ ಮೂರನೇ ಅಲೆಯು ಮುಂದಿನ ತಿಂಗಳ ಹೊತ್ತಿಗೇ ಕಾಣಿಸಿಕೊಳ್ಳಬಹುದು ಮತ್ತು ಸೆಪ್ಟೆಂಬರ್‌ ಮಧ್ಯದ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ಹೋಗಬಹುದು ಎಂದು ಎಸ್‌ಬಿಐ–ರಿಸರ್ಚ್‌ನ ವರದಿಯು ಹೇಳಿದೆ.

ಈ ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಆಗಸ್ಟ್‌ ಎರಡನೇ ವಾರದ ಹೊತ್ತಿಗೇ ‍ಪ್ರಕರಣಗಳಲ್ಲಿ ಏರಿಕೆ ಕಾಣಿಸಿಕೊಳ್ಳಬಹುದು ಎಂದು ವರದಿಯು ಅಂದಾಜಿಸಿದೆ. ಜಾಗತಿಕ ದತ್ತಾಂಶಗಳ ಅಧಾರದಲ್ಲಿ ಲೆಕ್ಕ ಹಾಕಿದರೆ, ಮೂರನೇ ಅಲೆಯು ಗರಿಷ್ಠ ಮಟ್ಟದಲ್ಲಿರುವಾಗ ಪ್ರಕರಣಗಳ ಸಂಖ್ಯೆಯು ಎರಡನೇ ಅಲೆಯ 1.7 ಪಟ್ಟು ಇರಬಹುದು ಎಂದು ಸಂಶೋಧನಾ ವರದಿಯು ಹೇಳಿದೆ.

ತಲಾ ಆದಾಯ ಹೆಚ್ಚು ಇರುವ ದೇಶಗಳಲ್ಲಿ ಸಾವಿನ ಪ್ರಮಾಣವೂ ಹೆಚ್ಚು ಎಂಬುದು ಕೋವಿಡ್‌–19ರ ಎರಡು ಅಲೆಗಳ ಸಂದರ್ಭದಲ್ಲಿ ಅರಿವಿಗೆ ಬಂದಿದೆಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT