ಮಂಗಳವಾರ, ಜನವರಿ 25, 2022
28 °C

ಕೋವಿಡ್‌: ಮಹಾರಾಷ್ಟ್ರದಲ್ಲಿ 12,160 ಹೊಸ ಪ್ರಕರಣಗಳು, 68 ಜನರಿಗೆ ಓಮೈಕ್ರಾನ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಸೋಮವಾರವೂ ಕೋವಿಡ್‌–19 ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಂಡಿದ್ದು, ಮುಂಬೈನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. 24 ಗಂಟೆಗಳ ಅಂತರದಲ್ಲಿ 12,160 ಹೊಸ ಪ್ರಕರಣಗಳು ದಾಖಲಾಗಿದ್ದು, 11 ಮಂದಿ ಮೃತಪಟ್ಟಿರುವುದು ಆರೋಗ್ಯ ಇಲಾಖೆ ಪ್ರಕಟಣೆಯಿಂದ ತಿಳಿದು ಬಂದಿದೆ.

ಓಮೈಕ್ರಾನ್‌ ದೃಢಪಟ್ಟ 68 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 578ಕ್ಕೆ ಏರಿಕೆಯಾಗಿದೆ. ಇಂದು ಮುಂಬೈವೊಂದರಲ್ಲೇ 40 ಜನರಿಗೆ ಓಮೈಕ್ರಾನ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಇಂದು ದಾಖಲಾಗಿರುವ 12,160 ಹೊಸ ಪ್ರಕರಣಗಳ ಪೈಕಿ ಮುಂಬೈ ಮೆಟ್ರೊಪಾಲಿಟನ್‌ ಪ್ರದೇಶದಲ್ಲಿ 10,682 ಪ್ರಕರಣಗಳು, ಪುಣೆ ವಲಯದಲ್ಲಿ 815 ಪ್ರಕರಣಗಳು, ನಾಸಿಕ್‌ನಲ್ಲಿ 277 ಪ್ರಕರಣಗಳು ವರದಿಯಾಗಿವೆ. ರಾಜ್ಯದಾದ್ಯಂತ ಒಟ್ಟು 52,422 ಸಕ್ರಿಯ ಪ್ರಕರಣಗಳಿವೆ.

ಸೋಂಕಿಗೆ ಸಂಬಂಧಿಸಿದಂತೆ ಹೆಚ್ಚು ಅಪಾಯ ಹೊಂದಿರುವ ರಾಷ್ಟ್ರಗಳಿಂದ ಒಟ್ಟು 32,705 ಮಂದಿ ಮಹಾರಾಷ್ಟ್ರಕ್ಕೆ ಬಂದಿಳಿದಿದ್ದಾರೆ. ಭಾನುವಾರ ಕೋವಿಡ್‌ ದೃಢಪಟ್ಟ 11,877 ಹೊಸ ಪ್ರಕರಣಗಳು ವರದಿಯಾಗಿದ್ದವು ಹಾಗೂ ಸೋಂಕಿನಿಂದ 9 ಮಂದಿ ಸಾವಿಗೀಡಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು