ಶುಕ್ರವಾರ, ಜೂನ್ 25, 2021
21 °C

ಗೋ ಮೂತ್ರ ಅರ್ಕ ಸೇವನೆಯಿಂದ ಕೊರೊನಾದಿಂದ ರಕ್ಷಣೆ: ಪ್ರಜ್ಞಾ

ಪಿಟಿಐ‌ Updated:

ಅಕ್ಷರ ಗಾತ್ರ : | |

ಭೋಪಾಲ: ಗೋ ಮೂತ್ರ ಅರ್ಕವು ಕೊರೊನಾ ವೈರಸ್ ಮತ್ತು ಶ್ವಾಸಕೋಶದ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.

ದೇಶಿ ಹಸುವಿನ ಗೋಮೂತ್ರ ಅರ್ಕವು ನಮ್ಮ ಶ್ವಾಸಕೋಶದಿಂದ ಸೋಂಕನ್ನು ನಿವಾರಿಸುತ್ತದೆ. ನಾನು ತುಂಬಾ ಆರೋಗ್ಯ ಸಮಸ್ಯೆಯಲ್ಲಿದ್ದೇನೆ. ಆದರೆ ಪ್ರತಿದಿನ ಗೋಮೂತ್ರ ಅರ್ಕ ಸೇವಿಸುತ್ತೇನೆ. ಇದರಿಂದಾಗಿ ಕೊರೊನಾವೈರಸ್‌ಗಾಗಿ ಬೇರೆ ಔಷಧಿ ತೆಗೆದುಕೊಳ್ಳಬೇಕಾಗಿಲ್ಲ. ನನಗೆ ಇದುವರೆಗೆ ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂದು ಪ್ರಜ್ಞಾ ತಿಳಿಸಿದ್ದಾರೆ.

ಇದನ್ನೂ ಓದಿ: 

ಗೋ ಮೂತ್ರವು ಜೀವ ಉಳಿಸುವ ಔಷಧಿ. ಗೋಮೂತ್ರ ಔಷಧಿಯನ್ನು ಬಳಸುತ್ತಿರುವುದರಿಂದ ದೇವರು ನನ್ನನ್ನು ರಕ್ಷಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಭೋಪಾಲದಲ್ಲಿ ಆಮ್ಲಜನಕ ಸಾಂದ್ರಕ ವಿತರಿಸುವ ಕಾರ್ಯಕ್ರಮವೊಂದರಲ್ಲಿ ಪ್ರಜ್ಞಾ ಹೇಳಿದ್ದಾರೆ.

ಏತನ್ಮಧ್ಯೆ ಗೋಮೂತ್ರ ಕುಡಿಯುವವರಿಗೆ ಸಗಣಿ ಲೇಪಿಸಿಕೊಳ್ಳುವವರಿಗೆ ವೈದ್ಯರು ಎಚ್ಚರಿಕೆ ನೀಡಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು