ಭಾನುವಾರ, ಫೆಬ್ರವರಿ 28, 2021
20 °C
ಮುಖ್ಯಮಂತ್ರಿ ವಿರುದ್ಧ ಶಾಸಕರ ಬಂಡಾಯ

ಪುದುಚೇರಿಯಲ್ಲಿ ಬಿಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್–ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಡಿಎಂಕೆ ಪುದುಚೇರಿ ಘಟಕ ಮಹತ್ವದ ಸಭೆ ಸೇರಲು ನಿರ್ಧರಿಸಿದೆ.

ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ತಮ್ಮ ಪಕ್ಷದ ಶಾಸಕರಿಂದ ಬಂಡಾಯ ಎದುರಿಸುತ್ತಿದ್ದಾರೆ. ಪುದುಚೇರಿಯಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಜೊತೆ ಡಿಎಂಕೆ ಪಕ್ಷದ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಆಡಳಿತಾರೂಢ ಸರ್ಕಾರವು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಮುಂದಿನ ಚುನಾವಣೆಯನ್ನು ಬೇರೊಂದು ಮೈತ್ರಿಕೂಟದ ಜೊತೆ ಎದುರಿಸಲು ಪುದುಚೇರಿ ಡಿಎಂಕೆ ಘಟಕ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಮಹತ್ವದ ಸಭೆ ನಿಗದಿಯಾಗಿದ್ದು, ಕಾಂಗ್ರೆಸ್ ಮೈತ್ರಿಕೂಟದಿಂದ ಪಕ್ಷ ಹೊರಬರುವ ನಿರ್ಧಾರ ಪ್ರಕಟವಾಗಲಿದೆ ಎಂಬ ಊಹಾಪೋಹ ಎದ್ದಿದೆ. ಈ ಊಹಾಪೋಹಕ್ಕೆ ಇಂಬು ನೀಡುವಂತಹ ವಿದ್ಯಮಾನಗಳೂ ನಡೆದಿವೆ. ಆಡಳಿತದಲ್ಲಿ ಅನಗತ್ಯ
ವಾಗಿ ಹಸ್ತಕ್ಷೇಪ ಮಾಡಿದ ಆರೋಪದಮೇಲೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ನಾರಾಯಣಸಾಮಿ ಕರೆದಿದ್ದ ಪ್ರತಿಭಟನೆಯನ್ನು ಡಿಎಂಕೆ ಬಹಿಷ್ಕರಿಸಿತ್ತು.

ಪುದುಚೇರಿ ಘಟಕ ಮುಂದಿಟ್ಟಿರುವ ಸಲಹೆಯು ಡಿಎಂಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ‘ನಾವು ತಮಿಳುನಾಡು ಮತ್ತು ಪುದುಚೇರಿಗಾಗಿ ಎರಡು ವಿಭಿನ್ನ ನಿಲುವುಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಹಾಗೂ ಪುದುಚೇರಿಯಲ್ಲಿ ಮೈತ್ರಿಯಿಂದ ಹೊರಬರಲು ಸಾಧ್ಯವಿಲ್ಲ. ಅಂತಹ ನಿರ್ಧಾರವು ಸಾಕಷ್ಟು ವಿರೋಧಾಭಾಸಗಳಿಗೆ ಕಾರಣವಾಗುತ್ತದೆ’ ಎಂದು ಡಿಎಂಕೆ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಲ್ಲದೆ, ನಾರಾಯಣಸಾಮಿ ಕಾರ್ಯವೈಖರಿ ಬಗ್ಗೆ ಒಂದಿಬ್ಬರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಪಕ್ಷದ ಸದಸ್ಯರಲ್ಲಿ ಅಸಮಾಧಾನವಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು