ಶನಿವಾರ, ಅಕ್ಟೋಬರ್ 16, 2021
22 °C

ತಾಜ್‌ಮಹಲ್‌ ಸುಂದರ ಸ್ಥಳ: ಡೆನ್ಮಾರ್ಕ್‌ ಪ್ರಧಾನಿ ಉದ್ಗಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆಗ್ರಾ: ಡೆನ್ಮಾರ್ಕ್‌ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ತಮ್ಮ ಪತಿ ಬೋ ಟೆಂಗ್‌ ಬರ್ಗ್‌ ಅವರೊಡನೆ ಭಾನುವಾರ ಬೆಳಿಗ್ಗೆ ಇಲ್ಲಿಯ ತಾಜ್‌ಮಹಲ್‌ಗೆ ಭೇಟಿ ನೀಡಿದರು.

ತಾಜ್‌ಮಹಲ್‌ ಸೌಂದರ್ಯವನ್ನು ಕಂಡು ಇದೊಂದು ಸುಂದರ ಸ್ಥಳ ಉದ್ಗರಿಸಿದರು. 

ಮೆಟ್ಟೆ ಅವರು ಶನಿವಾರ ರಾತ್ರಿ 8.30ರ ಸುಮಾರಿಗೆ ಆಗ್ರಾದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಉತ್ತರ ಪ್ರದೇಶದ ಇಂಧನ ಸಚಿವ ಕಾಂತ್‌ ಶರ್ಮಾ ಅವರು ನಗರ ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಪ್ರಧಾನಿ ಅವರನ್ನು ಸ್ವಾಗತಿಸಿದರು. 

ನಂತರ ಮೆಟ್ಟೆ ಅವರು ಹೋಟೆಲ್‌ ಅಮರ್‌ ವಿಲಾಸ್‌ನಲ್ಲಿ ರಾತ್ರಿ ತಂಗಿದ್ದರು.   

ಡೆನ್ಮಾರ್ಕ್‌ ಪ್ರಧಾನಿ, ಅವರ ಪತಿ ಮತ್ತು ನಿಯೋಗವೊಂದು ವಾಹನಗಳಲ್ಲಿ ಭಾನುವಾರ ಬೆಳಿಗ್ಗೆ ತಾಜ್‌ಮಹಲ್‌ಗೆ ಆಗಮಿಸಿದರು. ಸ್ಥಳೀಯ ಬ್ರಜ್‌ ಕಲಾವಿದರು ಅವರನ್ನು ಸ್ವಾಗತಿಸಿದರು. 

ಮೆಟ್ಟೆ ಅವರು ತಮ್ಮ ಪತಿಯೊಂದಿಗೆ ತಾಜ್‌ಮಹಲ್‌ನ ಒಳಗೆ ಒಂದೂವರೆ ಗಂಟೆಗಳ ಕಾಲ ಸಮಯ ಕಳೆದರು. ಈ ವೇಳೆ ಪ್ರವಾಸಿ ಮಾರ್ಗದರ್ಶಿ ಹೇಳಿದ ಇತಿಹಾಸವನ್ನು ಕೌತುಕದಿಂದ ಆಲಿಸಿದರು.   

ವೀಕ್ಷಣೆಯ ನಂತರ ಮೆಟ್ಟೆ ಅವರು ಸಂದರ್ಶಕರ ಪುಸ್ತಕದಲ್ಲಿ ಭೇಟಿಯ ಕುರಿತು ಧನ್ಯವಾದ ಎಂದು ಬರೆದರು. ಈ ಸ್ಥಳವು ಬಹಳ ಸುಂದರವಾಗಿದೆ ಎಂದು ಬಣ್ಣಿಸಿದರು.

ಬಳಿಕ ಪ್ರಧಾನಿ ಮೆಟ್ಟೆ ಅವರು 10.50ಕ್ಕೆ ಆಗ್ರಾ ಕೋಟೆಗೆ ಭೇಟಿ ನೀಡಿ 11.50ರ ವರೆಗೆ ಕೋಟೆಯಲ್ಲಿ ಕಾಲ ಕಳೆದರು.  

ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದೇಶದಂತೆ ಪ್ರಧಾನಿ ಮೆಟ್ಟೆ ಅವರ ಭೇಟಿ ಸಮಯದಲ್ಲಿ ತಾಜ್‌ಮಹಲ್‌ ಮತ್ತು ಆಗ್ರಾ ಕೋಟೆಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಚ್ಚಲಾಗಿತ್ತು.

ಡೆನ್ಮಾರ್ಕ್‌ ಪ್ರಧಾನಿ ಅವರು ಭಾರತದಲ್ಲಿ ಮೊದಲನೇ ಪ್ರವಾಸದಲ್ಲಿದ್ದಾರೆ. ಅವರು ಶನಿವಾರ ದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು