ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ದಿಟ್ಟ ಉತ್ತರ: ಕೇಂದ್ರಕ್ಕೆ ರಾಹುಲ್‌ ಆಗ್ರಹ

Last Updated 29 ಜನವರಿ 2023, 14:38 IST
ಅಕ್ಷರ ಗಾತ್ರ

ಶ್ರೀನಗರ: ‘ಕೇಂದ್ರ ಸರ್ಕಾರ ಚೀನಾದೊಂದಿಗೆ ದೃಢವಾಗಿ ವ್ಯವಹರಿಸಬೇಕು. ನಮ್ಮ ನೆಲದ ಅತಿಕ್ರಮಣವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಬೇಕು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಹೇಳಿದರು.

ಭಾರತ್‌ ಜೋಡೊ ಯಾತ್ರೆ ಅಂಗವಾಗಿ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಚೀನಾ ಪಡೆಗಳು ನಮ್ಮ ನೆಲವನ್ನು ಆಕ್ರಮಿಸಿಕೊಂಡಿಲ್ಲ ಎಂದು ನಂಬಿರುವ ದೇಶದ ಏಕೈಕ ವ್ಯಕ್ತಿಯೆಂದರೆ ಭಾರತದ ಪ್ರಧಾನಿ. ಆದರೆ, ಇತ್ತೀಚೆಗೆ ಸೇನೆಯ ಕೆಲ ಮಾಜಿ ಅಧಿಕಾರಿಗಳು ಹಾಗೂ ಲಡಾಖ್‌ನ ಜನರನ್ನು ಭೇಟಿ ಮಾಡಿದ್ದೆ. ಭಾರತದ 2 ಸಾವಿರ ಚದರ ಮೀಟರ್‌ನಷ್ಟು ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದಾಗಿ ಅವರು ಹೇಳಿದರು’ ಎಂದು ರಾಹುಲ್‌ ವಿವರಿಸಿದರು.

‘ಈ ಮೊದಲು ಭಾರತದ ಗಡಿಯೊಳಗೇ ಇದ್ದ ಹಲವಾರು ಗಸ್ತು ಠಾಣೆಗಳು ಈಗ ಚೀನಾ ಪಾಲಾಗಿವೆ ಎಂಬುದಾಗಿ ತಿಳಿಸಿದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT