ಭಾನುವಾರ, ಫೆಬ್ರವರಿ 28, 2021
21 °C

ಶೌರ್ಯ ಪ್ರಶಸ್ತಿ ಪುರಸ್ಕೃತರ ನವೀಕರಿಸಿದ ವೆಬ್‌ಸೈಟ್‌ ಉದ್ಘಾಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶೌರ್ಯ ಪ್ರಶಸ್ತಿ ಹಾಗೂ ಸ್ವಾತಂತ್ರ್ಯದ ನಂತರ ಈ ಪ್ರಶಸ್ತಿ ಪಡೆದವರ ಮಾಹಿತಿ ನೀಡುವ ನವೀಕರಿಸಲಾದ ವೆಬ್‌ಸೈಟ್‌ ಅನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೋಮವಾರ ಉದ್ಘಾಟಿಸಿದರು.

ಇದೇ ವೇಳೆ, ಶೌರ್ಯ ಪ್ರಶಸ್ತಿ ರಸಪ್ರಶ್ನೆ ಸ್ಪರ್ಧೆ ಹಾಗೂ ‘ಶೌರ್ಯವಾನ್‌’ ಹೆಸರಿನ ಡಿಜಿಟಲ್‌ ನಿಯತಕಾಲಿಕಕ್ಕೂ ಸಿಂಗ್‌ ಚಾಲನೆ ನೀಡಿದರು.

‘ದೇಶದ ಭದ್ರತೆ ಹಾಗೂ ಸಾರ್ವಭೌಮತ್ವವನ್ನು ಯೋಧರು ಕಾಪಾಡುತ್ತಿದ್ದು, ಅವರ ಕೊಡುಗೆ ಇಲ್ಲದೇ 2025ರೊಳಗೆ ₹3 ಲಕ್ಷ ಕೋಟಿ ಆರ್ಥಿಕತೆಯನ್ನು ಹೊಂದುವುದನ್ನು ಭಾರತವು ಊಹಿಸಲೂ ಸಾಧ್ಯವಿಲ್ಲ. ದೇಶಕ್ಕಾಗಿ ಅವರು ನೀಡಿದ ಬಲಿದಾನಕ್ಕೆ ಪ್ರತಿಯಾಗಿ ನಾವು ಯಾವ ರೀತಿಯಲ್ಲೂ ಏನನ್ನೂ ನೀಡಲು ಸಾಧ್ಯವಿಲ್ಲ. ಯೋಧರಿಗೆ ನಮ್ಮ ಕೃತಜ್ಞತೆ ಸಲ್ಲಿಸುವ ಯಾವ ಅವಕಾಶವನ್ನೂ ನಾವು ಕಳೆದುಕೊಳ್ಳುವುದಿಲ್ಲ’ ಎಂದು ಸಿಂಗ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು