ಗುರುವಾರ , ಮೇ 6, 2021
22 °C

ದೆಹಲಿ ಸರ್ಕಾರದಿಂದ ಆಮ್ಲಜನಕ ಟ್ಯಾಂಕರ್‌ ದರೋಡೆ: ಸಚಿವ ವಿಜ್‌ ಆರೋಪ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಕೋವಿಡ್‌–19 ರೋಗಿಗಳಿಗೆ ನೀಡುವ ಸಲುವಾಗಿ ಪಾಣಿಪತ್‌ನಿಂದ ಫರೀದಾಬಾದ್‌ಗೆ ಆಮ್ಲಜನಕ ಸಾಗಿಸುತ್ತಿ್ದ ಟ್ಯಾಂಕರ್‌ಅನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌ ಬುಧವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಪಾಣಿಪತ್‌ನಿಂದ ಫರೀದಾಬಾದ್‌ಗೆ ಬರುವಾಗ ದೆಹಲಿ ಮೂಲಕ ಟ್ಯಾಂಕರ್‌ ಸಾಗುತ್ತಿತ್ತು. ಆಗ, ಟ್ಯಾಂಕರ್‌ಅನ್ನು ದೋಚಲಾಗಿದೆ. ಸರ್ಕಾರವೇ ಇಂಥ ಕೃತ್ಯಗಳಲ್ಲಿ ತೊಡಗಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು’ ಎಂದರು.

‘ರಾಜ್ಯದ ಆಸ್ಪತ್ರೆಗಳಿಗೆ ಆಮ್ಲಜನಕ ಹೊತ್ತು ತರುವ ಟ್ಯಾಂಕರ್‌ಗಳಿಗೆ ಈಗ ಪೊಲೀಸ್‌ ಭದ್ರತೆ ಒದಗಿಸಲಾಗುತ್ತಿದೆ. ಈ ಘಟನೆ ಬಗ್ಗೆ ದೆಹಲಿ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು