ಶುಕ್ರವಾರ, ಜುಲೈ 1, 2022
22 °C
ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾರಿಂದ ಬಜೆಟ್‌ ಮಂಡನೆ

5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ: ದೆಹಲಿ ಬಜೆಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ 2022–23ನೇ ಸಾಲಿನ ಬಜೆಟ್‌ಅನ್ನು ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಶನಿವಾರ ಮಂಡಿಸಿದರು.

ತಾವು ಮಂಡಿಸಿದ ₹ 75,800 ಕೋಟಿ ಯೋಜನಾಗಾತ್ರದ ಬಜೆಟ್‌ಅನ್ನು ‘ರೋಜ್‌ಗಾರ್‌ ಬಜೆಟ್‌’ ಎಂದು ಬಣ್ಣಿಸಿದ ಸಿಸೋಡಿಯಾ, ‘ಉದ್ಯೋಗಾವಕಾಶಗಳ ಸೃಷ್ಟಿಗಾಗಿ ದೆಹಲಿಯಲ್ಲಿ ಎಲೆಕ್ಟ್ರಾನಿಕ್‌ ಸಿಟಿ, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು’ ಎಂದರು.

‘ಈ ಉದ್ದೇಶಕ್ಕಾಗಿ ಒಟ್ಟು ₹ 4,500 ಕೋಟಿ ವೆಚ್ಚ ಮಾಡಲಾಗುತ್ತಿದ್ದು, 2022–23ನೇ ಹಣಕಾಸು ವರ್ಷದಲ್ಲಿ ₹ 800 ಕೋಟಿ ತೆಗೆದಿರಿಸಲಾಗುವುದು’ ಎಂದು ಹೇಳಿದರು.

‘ಕಳೆದ ಹಣಕಾಸು ವರ್ಷದ ಬಜೆಟ್‌ ಗಾತ್ರ ₹ 69,000 ಕೋಟಿ ಇತ್ತು. ಕಳೆದ ಸಾಲಿಗೆ ಹೋಲಿಸಿದರೆ, 2022–23ನೇ ಸಾಲಿನ ಬಜೆಟ್‌ನ ಯೋಜನಾಗಾತ್ರ  ಶೇ 9.86ರಷ್ಟು ಅಧಿಕವಾಗಿರಲಿದೆ. ಕೋವಿಡ್‌–19 ಪಿಡುಗಿನಿಂದ ಕುಂಠಿತಗೊಂಡಿದ್ದ ದೆಹಲಿಯ ಆರ್ಥಿಕತೆಯ ಪುನಶ್ಚೇತನಕ್ಕೆ ಇದು ನೆರವಾಗಲಿದೆ’ ಎಂದು ಹೇಳಿದರು.

‘ಸಮಾಜದ ಎಲ್ಲ ವರ್ಗದವರ ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್‌ಅನ್ನು ಉಪಮುಖ್ಯಮಂತ್ರಿ ಸಿಸೋಡಿಯಾ ಮಂಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಕ್ಷೇತ್ರಕ್ಕೆ ₹ 9,699 ಕೋಟಿ, ಶಿಕ್ಷಣ ಕ್ಷೇತ್ರ ₹ 16,278 ಕೋಟಿ ತೆಗೆದಿರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು