ಮಂಗಳವಾರ, ಜನವರಿ 18, 2022
15 °C

ದೆಹಲಿ: ಖಾಸಗಿ ಆಸ್ಪತ್ರೆಗಳ ಶೇ 40ರಷ್ಟು ಹಾಸಿಗೆ ಕೋವಿಡ್ ರೋಗಿಗಳಿಗೆ ಮೀಸಲು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ಕೆಲವು ದಿನಗಳಿಂದ ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ನಿಂದಾಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ತಮ್ಮ ಒಟ್ಟು ಹಾಸಿಗೆ ಸಾಮರ್ಥ್ಯದ ಕನಿಷ್ಠ ಶೇಕಡಾ 40 ರಷ್ಟು ಕಾಯ್ದಿರಿಸುವಂತೆ 50 ಅಥವಾ ಅದಕ್ಕಿಂತ ಹೆಚ್ಚಿನ ಹಾಸಿಗೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಿಗೆ ದೆಹಲಿ ಸರ್ಕಾರ ಮಂಗಳವಾರ ನಿರ್ದೇಶನ ನೀಡಿದೆ.

ಡಿಸೆಂಬರ್ 31, 2021 ರಂದು ಶೇಕಡ 2.44 ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರವು ಮಂಗಳವಾರ ಶೇಕಡ 8ಕ್ಕಿಂತ ಹೆಚ್ಚಾಗಿದೆ ಎಂದು ಸರ್ಕಾರವು  ಪ್ರಕಟಣೆದಲ್ಲಿ ತಿಳಿಸಿದೆ.

ಓಮೈಕ್ರಾನ್ ಪ್ರಸರಣವು ತುಂಬಾ ಹೆಚ್ಚಾಗಿದೆ ಮತ್ತು ಸಮುದಾಯದಲ್ಲಿ ಸೋಂಕಿತರ ಸಂಖ್ಯೆಯು ಏರುತ್ತಿದೆ ಎಂದು ಅದು ಹೇಳಿದೆ.

ದೆಹಲಿಯಲ್ಲಿ ಮಂಗಳವಾರ 5,481 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಮೇ 16 2021ರಿಂದ ದಾಖಲಾದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಪಾಸಿಟಿವಿಟಿ ದರ ಶೇಕಡ 8.37 ರಷ್ಟಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮೇ 16 2021ರಂದು ದೆಹಲಿಯಲ್ಲಿ 6,456 ಹೊಸ ಪ್ರಕರಣ, 262 ಸಾವು ಸಂಭವಿಸಿದ್ದವು.

ದೆಹಲಿಯಲ್ಲಿ 531 ಕೋವಿಡ್ ರೊಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. 14 ರೋಗಿಗಳಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದ್ದು, ಸೌಮ್ಯ ರೋಗಲಕ್ಷಣಗಳು ಕಂಡುಬಂದಿರುವ 168 ರೋಗಿಗಳು ಕೃತಕ ಆಮ್ಲಜನಕ ನೀಡಲಾಗಿದ್ದು, ರೋಗ ಲಕ್ಷಣ ರಹಿತ 308 ಮಂದಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು