ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇನ 270 ಕಿ.ಮೀ. ಉದ್ದದ ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಭಾನುವಾರ (ಫೆ. 12) ಉದ್ಘಾಟಿಸಲಿದ್ದಾರೆ. ದೆಹಲಿ ಮತ್ತು ಮುಂಬೈ ನಡುವಣ ಪೂರ್ಣ ಹೆದ್ದಾರಿಯು ಸಿದ್ಧವಾದ ನಂತರ ಇದು ದೇಶದ ಅತ್ಯಂತ ಉದ್ದದ ಎಕ್ಸ್‌ಪ್ರೆಸ್ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ದೇಶದ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಎಂದೇ ಖ್ಯಾತವಾಗಿರುವ ಮುಂಬೈ ನಡುವಣ ಈ ಹೆದ್ದಾರಿಯು ಹಲವು ಕೈಗಾರಿಕಾ ಪ್ರದೇಶಗಳು, ವಿಮಾನ ನಿಲ್ದಾಣಗಳು ಮತ್ತು ಬಂದರಿನ ಮಧ್ಯೆ ನೇರ ಸಂಪರ್ಕ ಕಲ್ಪಿಸಲಿದೆ. ಈ ಎಕ್ಸ್‌ಪ್ರೆಸ್‌ವೇನಲ್ಲಿರುವ ಸವಲತ್ತುಗಳ ಚಿತ್ರಗಳನ್ನು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
1,458 ಕಿ.ಮೀ. ಈ ಎರಡೂ ನಗರಗಳ ಮಧ್ಯೆ ಈಗ ಇರುವ ಹೆದ್ದಾರಿಯ ಉದ್ದ
1,260 ಕಿ.ಮೀ. ಈ ಎರಡೂ ನಗರಗಳ ಮಧ್ಯೆ ಈಗ ನಿರ್ಮಾಣವಾಗುತ್ತಿರುವ ಎಕ್ಸ್‌ಪ್ರೆಸ್‌ವೇನ ಉದ್ದ
24–15 ಗಂಟೆ ಈಗಿನ ಹೆದ್ದಾರಿಯಲ್ಲಿ ಎರಡೂ ನಗರಗಳ ನಡುವಣ ಪ್ರಯಾಣದ ಅವಧಿ
12 ಗಂಟೆ ನೂತನ ಎಕ್ಸ್‌ಪ್ರೆಸ್‌ವೇನಲ್ಲಿ ಎರಡೂ ನಗರಗಳ ನಡುವಣ ಪ್ರಯಾಣದ ಅವಧಿ
–––
8 ಎಕ್ಸ್‌ಪ್ರೆಸ್‌ವೇನಲ್ಲಿರುವ ಮುಖ್ಯ ಲೇನ್‌ಗಳ ಸಂಖ್ಯೆ
2 ಎಕ್ಸ್‌ಪ್ರೆಸ್‌ವೇನಲ್ಲಿ ಇರುವ ಹೆಚ್ಚುವರಿ ತುರ್ತು ಲೇನ್‌ಗಳ ಸಂಖ್ಯೆ
l ಇದು ಎಂಟು ಲೇನ್‌ಗಳ ಹೆದ್ದಾರಿಯಾಗಿದ್ದು, ಭವಿಷ್ಯದಲ್ಲಿ 12 ಲೇನ್‌ಗಳಿಗೆ ವಿಸ್ತರಿಸಲು ಅಗತ್ಯವಾದಷ್ಟು ಭೂಮಿ ಇದೆ. ಲೇನ್‌ಗಳ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಅನುಕೂಲವಾಗುವಂತೆ ಎಕ್ಸ್‌ಪ್ರೆಸ್‌ವೇಯನ್ನು ವಿನ್ಯಾಸ ಮಾಡಲಾಗಿದೆ
l ಎಕ್ಸ್‌ಪ್ರೆಸ್‌ವೇ ಆರಂಭದಿಂದ ಕೊನೆಯವರೆಗೂ ಸಂಪೂರ್ಣವಾಗಿ ಸಿಗ್ನಲ್‌ಮುಕ್ತವಾಗಿದೆ. ಟೋಲ್ ಘಟಕಗಳ ಮೂಲಕವೇ ಎಕ್ಸ್‌ಪ್ರೆಸ್‌ವೇಗೆ ಪ್ರವೇಶ ಇರಲಿದೆ
l ನೆಲಮಟ್ಟದಿಂದ ಹಲವು ಮೀಟರ್‌ಗಳಷ್ಟು ಎತ್ತರದಲ್ಲಿ ಹೆದ್ದಾರಿ ನಿರ್ಮಿಸಲಾಗಿದೆ. ಅಗತ್ಯ ಇರುವೆಡೆ ಹೆದ್ದಾರಿ ಕೆಳಗೆ ಜಾನುವಾರು ಪಾಸ್‌ಗಳನ್ನು ನಿರ್ಮಿಸಲಾಗಿದೆ
l ಉತ್ತರ ಪ್ರದೇಶದ ಜೆವಾರ್ ವಿಮಾನ ನಿಲ್ದಾಣ, ಮುಂಬೈ ವಿಮಾನ ನಿಲ್ದಾಣಕ್ಕೆ ಈ ಎಕ್ಸ್‌ಪ್ರೆಸ್‌ವೇ ಸಂಪರ್ಕ ಕಲ್ಪಿಸುತ್ತದೆ
l ಮಹಾರಾಷ್ಟ್ರದ ಜವಾಹರ್ ಲಾಲ್ ನೆಹರೂ ಬಂದರಿಗೆ ಸಂಪರ್ಕ ಕಲ್ಪಿಸುತ್ತದೆ
l ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶವನ್ನು ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗುತ್ತದೆ
ಆಧಾರ: ಪಿಟಿಐ, ನಿತಿನ್ ಗಡ್ಕರಿ ಟ್ವೀಟ್‌ಗಳು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಟಣೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.