ಬುಧವಾರ, ಸೆಪ್ಟೆಂಬರ್ 30, 2020
19 °C

ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ ಲಾಕ್‌ಡೌನ್: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಉತ್ತಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಗಾಳಿಯ ಗುಣಮಟ್ಟ ಉತ್ತಮವಾಗಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ – ಲಾಕ್‌ಡೌನ್ ನಿಂದಾಗಿ ವಾಹನ ಸಂಚಾರಕ್ಕೆ ಬ್ರೇಕ್‌ ಬಿದ್ದಿದ್ದು, ಪರಿಸರಕ್ಕೆ ಪೂರಕವಾದ ಗಾಳಿಯ ವೇಗ ಮತ್ತು ಕಳೆದ ತಿಂಗಳು ಉತ್ತಮ ಮಳೆಯಾದ ಕಾರಣ, ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮಂಗಳವಾರ ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 48ರಷ್ಟಿತ್ತು. ಸುರಕ್ಷತಾ ಗಾಳಿಯ ಗುಣಮಟ್ಟ ಸೂಚ್ಯಂಕವು 0 ಯಿಂದ 50ರೊಳಗೆ ಇರಬೇಕು. 51 ರಿಂದ 100 ಸೂಚ್ಯಂಕವಿದ್ದರೆ ಅದು ಗಾಳಿಯ ಗುಣಮಟ್ಟ ಉತ್ತಮವಾಗಿದೆ ಎಂದು ಅರ್ಥ. 101–200ರ ಸೂಚ್ಯಂಕವು ಸಾಧಾರಣ ಗಾಳಿ ಗುಣಮಟ್ಟವನ್ನು ಸೂಚಿಸುತ್ತದೆ. ಉಳಿದಂತೆ 201–300ರ ಸೂಚ್ಯಂಕವು ಗಾಳಿಯ ಗುಣಮಟ್ಟ ಕಳಪೆಯಾಗಿರುವುದನ್ನು ಉಲ್ಲೇಖಿಸುತ್ತದೆ.

ಸೋಮವಾರ 24 ಗಂಟೆಗಳ ಸರಾಸರಿ ಗಾಳಿಗುಣಮಟ್ಟದ ಸೂಚ್ಯಂಕ 41 ರಷ್ಟಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2015ರಿಂದ ಇಲ್ಲಿವರೆಗೆ ದಾಖಲಿಸಿರುವ ಗಾಳಿಯು ಗುಣಮಟ್ಟ ಸೂಚ್ಯಂಕದಲ್ಲೇ ಇದು ಅತಿ ಕಡಿಮೆ ಸೂಚ್ಯಂಕವಾಗಿದೆ. ಈ ವರ್ಷದಲ್ಲಿ ಐದನೇ ಬಾರಿಗೆ ದೆಹಲಿಯಲ್ಲಿ ಶುದ್ಧಗಾಳಿಯ ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಮಾರ್ಚ್‌ 28, ಆಗಸ್ಟ್‌ 20, ಆಗಸ್ಟ್ 24ರಲ್ಲಿ ದಾಖಲಾದ ಗಾಳಿಯ ಗುಣಮಟ್ಟ ಸೂಚ್ಯಂಕ ಕ್ರಮವಾಗಿ 45,50,50 ಮತ್ತು 45ರಷ್ಟಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು