ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆ ಇದ್ದ ಗಾಳಿಯ ಗುಣಮಟ್ಟ ಕಳಪೆಯಾಗಿತ್ತು ಎಂದು ದಾಖಲಾಗಿದೆ. ವಾಯುವಿನಲ್ಲಿ PM2.5 ಮತ್ತುPM10 ಸೂಕ್ಷ್ಮ ಕಣಗಳ ಸಾಂದ್ರತೆ ಹೆಚ್ಚಿತ್ತು.

‘ಮುಂಬರುವ ದಿನಗಳಲ್ಲಿ ಗಾಳಿಯ ದಿಕ್ಕು ಬದಲಾವಣೆಯಾಗಲಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸುಧಾರಣೆಯಾಗುವ ಸಾಧ್ಯತೆ ಇದೆ’ ಎಂದು ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟದ ಮಾಪಕ ವಿಭಾಗ ‘ಸಫರ್‘ ತಿಳಿಸಿದೆ.

ದೆಹಲಿಯಲ್ಲಿಸೋಮವಾರ ಬೆಳಿಗ್ಗೆಗಾಳಿಯ ಗುಣಮಟ್ಟ ಸೂಚ್ಯಂಕ 240 ದಾಖಲಾಗಿದೆ. ಭಾನುವಾರ ಬೆಳಿಗ್ಗೆ ದಾಖಲಾದಂತೆ ಕಳೆದ 24 ಗಂಟೆಗಳ ಸರಾಸರಿ ಸೂಚ್ಯಂಕ 216 ಆಗಿತ್ತು ಎಂದು ವರದಿಯಾಗಿದೆ.

ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿಘನ ಮೀಟರ್ಗೆ 100 ಮೈಕ್ರೊಗ್ರಾಂಗಿಂತ ಕಡಿಮೆ ಇರುವ ಪಿಎಂ10 ಮಟ್ಟವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.