ಭಾನುವಾರ, ಜೂನ್ 26, 2022
22 °C

ಅಂಗವಿಕಲ ಬಾಲಕನಿಗೆ ಪ್ರವೇಶ ನಿರಾಕರಣೆ: ಇಂಡಿಗೊ ನಿಯಮ ಉಲ್ಲಂಘಿಸಿದೆ ಎಂದ ಡಿಜಿಸಿಎ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂಗವಿಕಲ ಬಾಲಕನಿಗೆ ‘ಇಂಡಿಗೊ’ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದ ಪ್ರಕರಣದಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಶೋಕಾಸ್ ನೋಟಿಸ್ ನೀಡಿದೆ.

ಇಂಡಿಗೊ ನಿಯಮಗಳನ್ನು ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಡಿಜಿಸಿಎ ಹೇಳಿದೆ.

ಅಂಗವಿಕಲ ಬಾಲಕನಿಗೆ ವಿಮಾನವೇರಲು ಇಂಡಿಗೊ ಸಿಬ್ಬಂದಿ ಬಿಡದ ವಿದ್ಯಮಾನ ಮೇ 7ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ವಿಮಾನ ಪ್ರವೇಶಿಸುವಾಗ ಬಾಲಕ ಹೆಚ್ಚು ದಿಗಿಲುಗೊಂಡಿದ್ದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗಬಹುದೆಂದು ಬಾಲಕನಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಸಿಬ್ಬಂದಿ ಮೇ 9ರಂದು ಪ್ರಕಟಿಸಿದ್ದರು. ಬಾಲಕನಿಗೆ ಪ್ರವೇಶ ನಿರಾಕರಿಸಿದ್ದರಿಂದ ಆತನ ತಂದೆ–ತಾಯಿ ಸಹ ಹೈದರಾಬಾದ್‌ಗೆ ಆ ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ.

ಈ ವಿಚಾರವಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಇಂತಹ ವರ್ತನೆ ಸಹಿಸಲಾಗದು. ಯಾರಿಗೂ ಈ ಪರಿಸ್ಥಿತಿ ಎದುರಾಗಬಾರದು. ತನಿಖೆ‌ಯನ್ನು ಖುದ್ದು ಪರಿಶೀಲಿಸುತ್ತಿದ್ದೇನೆ ಎಂದು ಹೇಳಿದ್ದರು.

ಬಾಲಕನಿಗೆ ವಿಮಾನವೇರಲು ಅವಕಾಶ ನೀಡದ ವಿಚಾರ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, ತನಿಖೆ ನಡೆಸಲು ಸತ್ಯಶೋದನಾ ಸಮಿತಿಯೊಂದನ್ನು ಡಿಜಿಸಿಎ ರಚಿಸಿತ್ತು.

ಸಮಿತಿಯು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದೆ. ಸಂಸ್ಥೆಯು ನಿಯಮ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖಾ ವರದಿಯಿಂದ ಎಂದು ಡಿಜಿಸಿಎ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು